ಮೇ 10 ರಂದು ಕಾಮೆಡ್ -ಕೆ ಪರೀಕ್ಷೆ, ಫೆ. 3ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ

ಬೆಂಗಳೂರು: ಕರ್ನಾಟಕ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯ ಕಾಲೇಜುಗಳು ಒಕ್ಕೂಟ(ಕಾಮೆಡ್ –ಕೆ) ರಾಜ್ಯದ 150ಕ್ಕೂ ಹೆಚ್ಚು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶದ ವಿವಿಧ ವಿವಿಗಳಲ್ಲಿನ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಮೇ 10ರಂದು ಕಾಮೆಡ್ –ಕೆ ಯೂನಿಗೇಜ್ ಪರೀಕ್ಷೆ -2025 ನಡೆಸಲಿದೆ.

ಈ ನಡುವೆ ಸಿಇಟಿ ಮತ್ತು ಕಾಮೆಡ್ -ಕೆ ಕೌನ್ಸೆಲಿಂಗ್ ವಿಚಾರದಲ್ಲಿ ಗೊಂದಲ ಉಂಟಾಗದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕಾಮೆಡ್ -ಕೆ ತೀರ್ಮಾನಿಸಿದೆ ಎಂದು ಕಾಮೆಡ್ -ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಕುಮಾರ್ ಮಾಹಿತಿ ನೀಡಿದ್ದಾರೆ.

20 ಸಾವಿರಕ್ಕೂ ಹೆಚ್ಚು ಇಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ ನಡೆಸುವ ಕಾಮೆಡ್ –ಕೆ ಯೂನಿಗೇಜ್ ಪರೀಕ್ಷೆಗೆ ಫೆಬ್ರವರಿ 3ರಿಂದ 15ರವರೆಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ದೇಶದ 200 ಕ್ಕೂ ಹೆಚ್ಚು ನಗರಗಳ 400 ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಕಾಮೆಡ್ –ಕೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read