ಕಮ್‌ಬ್ಯಾಕ್ ಕರುಣ್ : ಮುಂಬೈ ಬೌಲರ್‌ಗಳ ಬೆವರಿಳಿಸಿದ ಕನ್ನಡಿಗ | Watch Video

ದೆಹಲಿ: ಐಪಿಎಲ್ ಅಂಗಳದಲ್ಲಿ ಅಚ್ಚರಿಯ ಕಥೆಯೊಂದು ಭಾನುವಾರ ಅನಾವರಣಗೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಕರುಣ್ ನಾಯರ್, ಏಳು ವರ್ಷಗಳ ಬಳಿಕ ಸ್ಫೋಟಕ ಅರ್ಧಶತಕ ಸಿಡಿಸಿ ಎಲ್ಲರ ಗಮನ ಸೆಳೆದರು. ಅಷ್ಟೇ ಅಲ್ಲ, ಜಸ್ಪ್ರೀತ್ ಬೂಮ್ರಾರಂತಹ ವಿಶ್ವ ಶ್ರೇಷ್ಠ ಬೌಲರ್‌ಗೂ ಕರುಣ್ ಬೆವರಿಳಿಸಿದರು!

ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರುಣ್, ಕೇವಲ 22 ಎಸೆತಗಳಲ್ಲಿ 50 ರನ್ ಗಳಿಸಿ ಮಿಂಚಿದರು. ಬೂಮ್ರಾ ಅವರ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸಿ ಅಬ್ಬರಿಸಿದರು. ಕರುಣ್ ಅವರ ಈ ಬಿರುಸಿನ ಆಟದಿಂದ ಡೆಲ್ಲಿ ತಂಡ ಪವರ್‌ಪ್ಲೇನಲ್ಲಿಯೇ ಉತ್ತಮ ಮೊತ್ತ ಕಲೆಹಾಕಿತು. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಕರುಣ್, ಐಪಿಎಲ್‌ನಲ್ಲೂ ತಮ್ಮ ಲಯ ಮುಂದುವರಿಸಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಕರುಣ್ ಅವರ ಈ ಅದ್ಬುತ ಆಟ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಅನೇಕರು ಅವರ ಕಮ್‌ಬ್ಯಾಕ್ ಅನ್ನು ಕೊಂಡಾಡಿದರು. ಆದರೆ ಅಂತಿಮವಾಗಿ ಡೆಲ್ಲಿ ತಂಡಕ್ಕೆ ಗೆಲುವು ದಕ್ಕಲಿಲ್ಲ. ಮುಂಬೈ ಇಂಡಿಯನ್ಸ್‌ನ ಬೌಲರ್‌ಗಳು ಕೊನೆಯ ಹಂತದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ ಡೆಲ್ಲಿಯನ್ನು 193 ರನ್‌ಗಳಿಗೆ ಕಟ್ಟಿಹಾಕಿದರು. ಸ್ಪಿನ್ನರ್ ಕರ್ಣ್ ಶರ್ಮಾ ಮೂರು ವಿಕೆಟ್ ಪಡೆದು ಮಿಂಚಿದರು. ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿದ್ದ ಡೆಲ್ಲಿ, ದಿಢೀರ್ ಕುಸಿತ ಕಂಡು ಸೋಲೊಪ್ಪಿಕೊಂಡಿತು. ಕರುಣ್ ನಾಯರ್ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.

ಪಂದ್ಯದ ನಂತರ ಮಾತನಾಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ಕರುಣ್ ಅವರ ಬ್ಯಾಟಿಂಗ್ ಅಚ್ಚರಿ ಮೂಡಿಸಿತು ಎಂದರು. ಒಟ್ಟಾರೆಯಾಗಿ ರೋಚಕ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read