ಕಲಬುರಗಿ : ಕಲಬುರಗಿಯಲ್ಲಿ ಕಾಲೇಜು ಯುವತಿ ನಾಪತ್ತೆಯಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಜೈನ ಸಮುದಾಯದ ಬಿಎಸ್ ಸಿ ಪದವೀಧರೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಗೊಬ್ಬುರ ಗ್ರಾಮದ ಮಹಾವೀರ್ ಜೈನ್ ಎಂಬುವವರ ಪುತ್ರಿ ನಾಪತ್ತೆಯಾಗಿದ್ದಾಳೆ. ಯುವತಿ ನಗರದ ಖಾಸಗಿ ಕಾಲೇಜೊಂದರಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗಿದ್ದ ಯುವತಿ ನಾಪತ್ತೆಯಾಗಿದ್ದಾಳೆ.
ನಾಪತ್ತೆಯಾಗಿರುವ ಯುವತಿ ಗ್ರಾಮದ ಅನ್ಯಕೋಮಿನ ಯುವಕ ಮಶಾಕ್ ಗೆ ಮೆಸೇಜ್ ಮಾಡುತ್ತಿದ್ದಳು. ಈ ವಿಚಾರ ತಿಳಿದ ಪೋಷಕರು ಮಗಳಿಗೆ ಬುದ್ದಿವಾದ ಹೇಳಿ ಕಾಲೇಜು ಬಿಡಿಸಿದ್ದರು. ಈಗ ಯುವತಿ ಅದೇ ಗ್ರಾಮದ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಗುಲ್ಬರ್ಗಾ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.