ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಎಳನೀರು ದರ 40 -50 ರೂ.ಗೆ ಹೆಚ್ಚಳ

ಬೆಂಗಳೂರು: ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ದಾಹ ನೀಗಿಸಿಕೊಳ್ಳಲು ಜನರು ತಂಪು ಪಾನೀಯ, ಎಳನೀರು, ಐಸ್ ಕ್ರೀಂ ಮೊರೆ ಹೋಗಿದ್ದಾರೆ.

ಕಳೆದು ತಿಂಗಳು 30 ರಿಂದ 35 ರೂ. ಇದ್ದ ಎಳನೀರು ದರ ಈಗ 40 ರಿಂದ 50 ರೂ. ವರೆಗೆ ಏರಿಕೆಯಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಎಳನೀರಿಗೆ ಭಾರಿ ಬೇಡಿಕೆ ಬಂದಿದೆ. ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೆ ಎಳನೀರು ಮಾರಾಟವಾಗುತ್ತಿದೆ.

ಇನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ, ಸಮಾವೇಶ ಭರಾಟೆ ಜೋರಾಗಿದ್ದು, ಕಾರ್ಯಕರ್ತರು ಮುಖಂಡರು ದಾಹ ನೀಗಿಸಿಕೊಳ್ಳಲು ಎಳನೀರು ಮೊರೆ ಹೋಗಿದ್ದಾರೆ. ದೇಹಕ್ಕೆ ತಂಪು ನೀಡುವ ನೈಸರ್ಗಿಕ ಪಾನೀಯ ಎಳನೀರಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, 40 ರಿಂದ 50 ರೂ.ವರೆಗೆ ಮಾರಾಟವಾಗುತ್ತಿದೆ.

ರಾಜ್ಯದಲ್ಲಿ ಸುಮಾರು 5 ಲಕ್ಷ ಎಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದು ಶೇಕಡ 15ರಷ್ಟು ಪ್ರಮಾಣದಲ್ಲಿ ಎಳನೀರಿಗೆ ಬಳಕೆಯಾಗುತ್ತಿದೆ. 50ರಷ್ಟು ತೆಂಗಿನ ಕಾಯಿ, ಶೇಕಡ 5 ರಷ್ಟು ಕೈಗಾರಿಕೆ ಉತ್ಪನ್ನ, ಉಳಿದ ಶೇಕಡ 30ರಷ್ಟು ಎಣ್ಣೆ ಮೊದಲಾದವುಗಳಿಗೆ ಬಳಕೆಯಾಗುತ್ತಿದೆ.

ರಾಜ್ಯದ ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಮಾರಾಟಗಾರರು ಎಳನೀರು ಖರೀದಿಸುತ್ತಿದ್ದಾರೆ. ಎಳನೀರಿಗೆ ಬೇಡಿಕೆ ಜಾಸ್ತಿ ಇದೆ. ನಗರಗಳಿಗೆ ಬೇಡಿಕೆಗಿಂತ ಕಡಿಮೆ ಪ್ರಮಾಣದ ಎಳ ನೀರು ಸರಬರಾಜು ಆಗುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಎಳನೀರು ದರ 40 ರಿಂದ 50 ರೂ.ವರೆಗೆ ಮಾರಾಟವಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read