ಇದಪ್ಪಾ ಮಾರುಕಟ್ಟೆ ತಂತ್ರ….! ಕೋಕಾ-ಕೋಲಾ, ಪೆಪ್ಸಿ ಒಳ್ಳೆಯದು ಎಂದಿದೆ ಈ ಸಂಶೋಧನೆ

ಕೋಕಾ-ಕೋಲಾ ಮತ್ತು ಪೆಪ್ಸಿಯಂತಹ ತಂಪು ಪಾನೀಯಗಳ ಬಗ್ಗೆ ಹಿಂದಿನಿಂದಲೂ ವಿರೋಧಗಳಿವೆ. ಹಿಂದಿನ ವೈಜ್ಞಾನಿಕ ಸಂಶೋಧನೆಯು ಇವುಗಳು ಜೀವಕ್ಕೆ ಅಪಾಯ ಎನ್ನುವುದನ್ನು ತೋರಿಸಿವೆ.

ಪುರುಷರ ಸಂತಾನೋತ್ಪತ್ತಿ, ಆರೋಗ್ಯದ ಮೇಲೂ ಇವು ಪರಿಣಾಮ ಬೀರುವುದನ್ನು ಸಾಬೀತು ಪಡಿಸಲಾಗಿದೆ. ಚೀನಾದ ನಾರ್ತ್‌ವೆಸ್ಟ್ ಮಿನ್ಜು ವಿಶ್ವವಿದ್ಯಾಲಯದ ವಿಜ್ಞಾನಿಗಳು 150 ಇಲಿಗಳ ಮೇಲೆ ಸಂಶೋಧನೆ ನಡೆಸಿದ್ದು, ಇವುಗಳು ಹಾನಿಕಾರಕ ಎಂದು ಹೇಳಿದ್ದರು.

ಇದೀಗ ಈ ಪಾನೀಯಗಳ ತವರು ಅಮೆರಿಕದಿಂದ ಹೊಸ ವರದಿ ಬಂದಿದೆ. ಅದೇನೆಂದರೆ ಕೋಕಾ-ಕೋಲಾ ಮತ್ತು ಪೆಪ್ಸಿಯಂತಹ ಪಾನೀಯಗಳನ್ನು ಕುಡಿಯುವುದು ವೃಷಣಗಳ ಬೆಳವಣಿಗೆಗೆ ಪ್ರಯೋಜನಕಾರಿಯಂತೆ…! ಪ್ರಾಸ್ಟೇಟ್ ಅಪಸಾಮಾನ್ಯ ಕ್ರಿಯೆ ಮತ್ತು ಕ್ಯಾನ್ಸರ್ ಅನ್ನು ತಡೆಯುತ್ತದೆ ಎಂದು ಅದು ಹೇಳಿದೆ.

ಇದು ವೈರಲ್‌ ಆಗುತ್ತಿದ್ದಂತೆಯೇ ಬಹಳ ವಿರೋಧ ವ್ಯಕ್ತವಾಗಿದೆ. ತಮ್ಮ ಉತ್ಪನ್ನಗಳನ್ನು ಬೆಳೆಸಲು ಇಂಥ ಪ್ರಯೋಗಗಳ ಹೆಸರಿನಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read