ಕಾಕತ್ಪುರ: ಒಡಿಶಾದ ಪುರಿ ಜಿಲ್ಲೆಯ ಮನೆಯೊಂದರಲ್ಲಿ ರೆಫ್ರಿಜರೇಟರ್ ನಲ್ಲಿದ್ದ ನಾಗರಹಾವು ರಕ್ಷಣೆ ಮಾಡಲಾಗಿದೆ. ಪುರಿ ಜಿಲ್ಲೆಯ ಕಾಕತ್ಪುರ್ ಬ್ಲಾಕ್ ನ ಕುಂಧೈ ಗ್ರಾಮದ ನೃಸಿಂಘ ಪ್ರಧಾನ್ ಅವರ ಮನೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ.
ಹಾವಿನ ಸಹಾಯವಾಣಿಯ ಸದಸ್ಯ ಬ್ರಜ್ ಕಿಶೋರ್ ಸಾಹು ಅವರು ಕಾರ್ಯಾಚರಣೆ ನಡೆಸಿ ಮನೆಯಲ್ಲಿ ಫ್ರಿಡ್ಜ್ ನ ಐಸ್ ಟ್ರೇ ಒಳಗಿನಿಂದ ಒಂದು ದೊಡ್ಡ ನಾಗರಹಾವು ರಕ್ಷಣೆ ಮಾಡಲಾಗಿದೆ.
ನೃಸಿಂಘ ಅವರ ಪತ್ನಿ ಫ್ರಿಡ್ಜ್ ತೆರೆದಾಗ, ಐಸ್ ಟ್ರೇ ಹಿಂದೆ ಒಂದು ನಾಗರಹಾವು ಅಡಗಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದರು. ಗಾಬರಿಗೊಂಡ ಅವರು ಇತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು ಮತ್ತು ಅವರು ಶೀಘ್ರದಲ್ಲೇ ಹಾವಿನ ಸಹಾಯವಾಣಿಗೆ ಕರೆ ಮಾಡಿದರು.
ಹಾವಿನ ಸಹಾಯವಾಣಿಯಿಂದ ಮಾಹಿತಿ ಪಡೆದ ನಂತರ, ಬ್ರಜ್ ಸಾಹು ಅವರು ನೃಸಿಂಘ ಪ್ರಧಾನ್ ಅವರ ಮನೆಗೆ ಹೋಗಿ ಫ್ರಿಡ್ಜ್ ಒಳಗಿನಿಂದ ಬೃಹತ್ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ. ವಿಷಕಾರಿ ಹಾವನ್ನು ರಕ್ಷಿಸಲು ಅವರಿಗೆ ಸುಮಾರು ಅರ್ಧ ಗಂಟೆ ಬೇಕಾಯಿತು.
Cobra rescued from refrigerator in Kakatpur area of Puri district . #snake #Cobra#Rescue#Odisha pic.twitter.com/cy33DeP0F6
— Kalinga TV (@kalingatv) November 1, 2025
