ಐಪಿಎಲ್ ಮಾದರಿಯಲ್ಲಿ ರಾಜ್ಯ ಕ್ರೀಡೆಯ ಮಾನ್ಯತೆ ಪಡೆದ ಕರಾವಳಿಯ ‘ಕಂಬಳ’ ಆಯೋಜನೆ

ಮಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯ ಕ್ರೀಡೆಯ ಮಾನ್ಯತೆ ಪಡೆದುಕೊಂಡಿರುವ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ಐಪಿಎಲ್ ಮಾದರಿಯಲ್ಲಿ ಆಯೋಜಿಸಲು ಚಿಂತನೆ ನಡೆದಿದೆ.

ಐಪಿಎಲ್ ನಂತೆ ಉದ್ಯಮ ಕಂಪನಿಗಳಿಂದ ಬಿಡ್ ಆಹ್ವಾನಿಸಿ ಅದ್ದೂರಿಯಾಗಿ ಕಂಬಳ ಆಯೋಜಿಸಲು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಕಂಬಳ ಅಸೋಸಿಯೇಷನ್ ಚಿಂತನೆ ನಡೆಸಿದೆ.

ಅಸೋಸಿಯೇಷನ್ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಸಕ್ತ ಕರಾವಳಿಯಲ್ಲಿ ಸುಮಾರು 25 ಕಂಬಳಗಳು ನಡೆಯುತ್ತಿವೆ. ಪ್ರತಿ ವರ್ಷ ಹೊಸ ಕಂಬಳ ಸೇರ್ಪಡೆಯಾಗುತ್ತವೆ.

ಇವುಗಳ ಆಯೋಜನೆಗೆ ಸರ್ಕಾರದಿಂದ ಸಿಗುವ ಅನುದಾನ ಅತ್ಯಲ್ಪವಾಗಿದೆ. ಕಳೆದ ಬಾರಿ 5 ಲಕ್ಷ ರೂ. ನೀಡಲಾಗಿತ್ತು. ಈ ಬಾರಿ ಎರಡು ಲಕ್ಷ ನೀಡಲಾಗಿದೆ. ಒಂದು ಕಂಬಳ ನಡೆಸಲು 25 ರಿಂದ 40 ಲಕ್ಷ ರೂಪಾಯಿವರೆಗೆ ವೆಚ್ಚವಾಗುತ್ತದೆ. ಇಷ್ಟೊಂದು ವೆಚ್ಚವನ್ನು ಹಳ್ಳಿಗಾಡಿನ ಕಂಬಳ ಆಯೋಜಿಕರಿಗೆ ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಐಪಿಎಲ್ ಮಾದರಿಯಲ್ಲಿ ಬಿಡ್ ಪಡೆದು ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ.

ಈ ವರ್ಷ ಪ್ರತಿ ಕಂಬಳವನ್ನು ಒಂದೊಂದು ಕಂಪನಿಗೆ ವಹಿಸುವುದು. ಮುಂದಿನ ವರ್ಷದಿಂದ ಐಪಿಎಲ್ ಬಿಡ್ ಮಾದರಿಯಲ್ಲಿ ಕಂಬಳ ಏರ್ಪಡಿಸಲಾಗುವುದು. ಐಪಿಎಲ್ ಮಾದರಿಯಲ್ಲಿ ನಡೆಯುವ ಲೀಗ್ ಮಾದರಿಯಲ್ಲಿ ಸ್ಪರ್ಧೆ ನಡೆಯಲಿದೆ. ಸಂಪ್ರದಾಯದಂತೆಯೇ ಕಂಬಳ ಕ್ರೀಡೆಗೆ ಶಾಶ್ವತ ಸ್ಥಾನಮಾನ ಕಲ್ಪಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read