ಕಠಿಣ ಹವಾಮಾನದಲ್ಲಿ ರೋಗಿಯನ್ನು ಲಕ್ಷದ್ವೀಪದಿಂದ ಕೊಚ್ಚಿಗೆ ಸ್ಥಳಾಂತರಿಸಿದ ಕೋಸ್ಟ್​ಗಾರ್ಡ್ ಸಿಬ್ಬಂದಿ : ವ್ಯಾಪಕ ಮೆಚ್ಚುಗೆ

ತೀವ್ರ ಅಸ್ವಸ್ಥಗೊಂಡಿದ್ದ ವ್ಯಕ್ತಿಯ ಪ್ರಾಣವನ್ನು ಉಳಿಸುವ ಸಲುವಾಗಿ ಭಾರತೀಯ ಕೋಸ್ಟ್​ ಗಾರ್ಡ್​ ಯೋಧರು ಶುಕ್ರವಾರದಂದು ಕಠಿಣ ಹವಾಮಾನದ ನಡುವೆಯೂ ಡಾರ್ನಿಯರ್​ ವಿಮಾನದಲ್ಲಿ ಲಕ್ಷದ್ವೀಪದಿಂದ ಕೊಚ್ಚಿಗೆ ಸುಮಾರು 900 ಮೈಲಿಯಷ್ಟು ಪ್ರಯಾಣ ಮಾಡಿದ್ದಾರೆ ಎಂದು ವರದಿಯಾಗಿದೆ.

48 ವರ್ಷದ ವ್ಯಕ್ತಿಯೊಬ್ಬರು ಬ್ರೈನ್​ ಸ್ಟ್ರೋಕ್​ ಹಾಗೂ ಪ್ರಜ್ಞಾಹೀನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆಂಡ್ರೋತ್​ನ ಸರ್ಕಾರಿ ಆಸ್ಪತ್ರೆಯಿಂದ ಅವರನ್ನು ಕೊಚ್ಚಿಗೆ ಯಶಸ್ವಿಯಾಗಿ ಶಿಫ್ಟ್​ ಮಾಡಲಾಗಿದೆ.

ರೋಗಿಯನ್ನು ಆಂಡ್ರೋತ್​​ನಿಂದ ಅಗಟ್ಟಿಗೆ ಬಳಿಕ ಅಗಟ್ಟಿಯಿಂದ ಕೊಚ್ಚಿಗೆ ಶಿಫ್ಟ್​ ಮಾಡಲಾಗಿದೆ. ಕೊಚ್ಚಿಯ ಕೋಸ್ಟ್ ಗಾರ್ಡ್ ಏರ್ ಎನ್‌ಕ್ಲೇವ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಸೂಕ್ತ ವೈದ್ಯಕೀಯ ಸಲಕರಣೆಗಳೊಂದಿಗೆ ಕೋಸ್ಟ್ ಗಾರ್ಡ್ ಡೋರ್ನಿಯರ್ ಸ್ಟ್ಯಾಂಡ್‌ಬೈನಲ್ಲಿದೆ. ಆಂಡ್ರೋತ್‌ನಿಂದ ರೋಗಿಯನ್ನು ಕರೆದುಕೊಂಡು ಹೋಗಲು ಬೆಳಿಗ್ಗೆ 7 ಗಂಟೆಗೆ ವಿಮಾನ ಹೊರಟಿತ್ತು.

ತೀವ್ರ ಮಳೆಯ ನಡುವೆಯೂ ಕವರಟ್ಟಿ ಮತ್ತು ಆಂಡ್ರೋತ್‌ನಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ರೋಗಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು. ರಕ್ಷಣಾ ಪ್ರಕಟಣೆಯ ಪ್ರಕಾರ, ನಂತರ ಅವರನ್ನು ಕೋಸ್ಟ್ ಗಾರ್ಡ್ ಡೋರ್ನಿಯರ್ನಲ್ಲಿ ಅಗಟ್ಟಿಯಿಂದ ಕೊಚ್ಚಿಗೆ ಸ್ಥಳಾಂತರಿಸಲಾಯಿತು.”ಕೋಸ್ಟ್ ಗಾರ್ಡ್ ಡೋರ್ನಿಯರ್ ತೀವ್ರ ಹವಾಮಾನ ಪರಿಸ್ಥಿತಿಗಳಲ್ಲಿ ಸುಮಾರು 900 ಕಿಮೀ ದೂರ ಹಾರಾಟ ನಡೆಸಿತು ಮತ್ತು ಮಾರ್ಗದಲ್ಲಿ ರೋಗಿಗೆ ಅಗತ್ಯ ವೈದ್ಯಕೀಯ ಬೆಂಬಲವನ್ನು ಒದಗಿಸಿತು” ಎಂದು ಕೋಸ್ಟ್​ ಗಾರ್ಡ್​ ಹೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read