
ಹುಬ್ಬಳ್ಳಿ: ಪಂಚೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದು ಕಾಂಗ್ರೆಸ್ ನವರ ಕೆಳಮಟ್ಟದ ಭಾಷೆ, ಈ ವಿಚಾರವಾಗಿ ನಮ್ಮ ಪಕ್ಷದ ಬೇರೆ ಬೇರೆಯವರು ಮಾತನಾಡಿದ್ದಾರೆ. ಭಾರತ ಸರ್ಕಾರದ ಮಂತ್ರಿಯಾಗಿ ನಾನು ಆ ಪದ ಬಳಸಲ್ಲ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಸಿಎಂ ಸಿದ್ದರಾಮಯ್ಯ ಲುಂಗಿ ಲೀಡರ್. ಅದನ್ನು ಕಾಂಗ್ರೆಸ್ ನವರು ಮರೆಯಬಾರದು. ಅಸಭ್ಯ ಪದ ಬಳಸುವುದು ಸರಿಯಲ್ಲ. ಅಪ್ಪಿತಪ್ಪಿಯೂ ನನ್ನ ಬಾಯಲ್ಲಿ ಅಂತಹ ಭಾಷೆ ಬರುವುದಿಲ್ಲ. ಅದಕ್ಕೆಲ್ಲಾ ಜನರು ಉತ್ತರ ಕೊಡ್ತಾರೆ ಎಂದರು. ಇದೇ ವೇಳೆ ಇನ್ನು ಎರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ಹೇಳಿದರು.
