ನಿರ್ಮಾಪಕ ಸಂದೇಶ್ ನಾಗರಾಜ್ ಹುಟ್ಟುಹಬ್ಬದಲ್ಲಿ ಭಾಗಿಯಾದ ಸಿಎಂ ಸಿದ್ಧರಾಮಯ್ಯ ಶುಭಹಾರೈಕೆ

ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಇಂದು ಮಾಜಿ ವಿಧಾನ‌ ಪರಿಷತ್ ಸದಸ್ಯರು, ಚಲನಚಿತ್ರ‌ ನಿರ್ಮಾಪಕರು ಆದ ಸಂದೇಶ್ ನಾಗರಾಜ್ ಅವರ 80ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ಧರಾಮಯ್ಯ ಶುಭಹಾರೈಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಸಂದೇಶ್ ನಾಗರಾಜ್ ನನಗೆ 1985 ರಿಂದ ಪರಿಚಿತರು. ಸಂದೇಶ್ ನಾಗರಾಜ್ ಒಳ್ಳೆಯ ಕಬಡ್ಡಿ ಆಟಗಾರರಾಗಿದ್ದರು. ಮೊದಲು ಬಸ್ ಮಾಲೀಕರಾದರು, ನಂತರ ಹೋಟೆಲ್ ಮಾಲೀಕರಾದರು. ಸಿನಿಮಾ, ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ವಿಯಾದರು. ನಾವು ರಾಜಕೀಯವಾಗಿ ಒಟ್ಟಿಗೆ ಇರಲಿಲ್ಲ. ಅವರನ್ನು ವಿರೋಧಿಸಿದ್ದೆ. ವೈಯಕ್ತಿಕ ಸ್ನೇಹ ಹಾಗೇ ಇದೆ. ರಾಜಕೀಯವಾಗಿ ಪರಸ್ಪರ ನಾವು ವಿರೋಧಿಗಳಾದರೂ ಗೆಳೆತನಕ್ಕೆ ಭಂಗ ಬಂದಿಲ್ಲ ಎಂದು ಹೇಳಿದ್ದಾರೆ.

ಸಂದೇಶ್ ನಾಗರಾಜ್ ಅವರು 80 ವರ್ಷ ಪೂರೈಸಿದ್ದರೂ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಇವರು ಶತಾಯುಷಿ ಮಾತ್ರವಲ್ಲ, ಅದಕ್ಕಿಂತ ಹೆಚ್ಚು ಕಾಲ ಆರೋಗ್ಯಕರವಾಗಿ ಜೀವಿಸಲಿ ಎಂದು ಹಾರೈಸುತ್ತೇನೆ. ರಾಜಕೀಯವಾಗಿ ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದೇವೆ. ಆದರೆ ಸ್ನೇಹಕ್ಕೆ ಯಾವತ್ತೂ ಧಕ್ಕೆ ಆಗಿಲ್ಲ. ಸಂದೇಶ್ ನಾಗರಾಜ್‌ ಅವರು ಸ್ನೇಹಮಯಿ ವ್ಯಕ್ತಿತ್ವದವರಾಗಿದ್ದು, ಯಾವುದೇ ಕ್ಷೇತ್ರದಲ್ಲಿದ್ದರೂ ಯಶಸ್ಸು ಅವರನ್ನು ಹುಡುಕಿ ಬರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಬೈರತಿ ಸುರೇಶ್, ನಟ ಸುದೀಪ್, ಸಾಧುಕೋಕಿಲ ಸೇರಿ ಹಲವರು ಇದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read