ಡಾಲಿ ಧನಂಜಯ ‘ಹಲಗಲಿ’ ಟೀಸರ್ ವೀಕ್ಷಿಸಿದ ಸಿಎಂ ಸಿದ್ಧರಾಮಯ್ಯ ಶುಭ ಹಾರೈಕೆ

ಡಾಲಿ ಧನಂಜಯ ಅಭಿನಯದ ‘ಹಲಗಲಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಟೀಸರ್ ವೀಕ್ಷಿಸಿದ  ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಬ್ರಿಟಿಷರ ಸರ್ವಾಧಿಕಾರಿ ಸಾಮ್ರಾಜ್ಯದ ನಿಶಸ್ತ್ರೀಕರಣ ನೀತಿಯ ವಿರುದ್ಧ ಸಿಡಿದೆದ್ದ ಹಲಗಲಿಯ ಬೇಡರು ತಮ್ಮ ಅಸ್ಮಿತೆಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿ, ಹುತಾತ್ಮರಾದರು. ಹಲಗಲಿಯ ದಂಗೆ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಘಟನೆ.

ಬ್ರಿಟಿಷರ ತುಪಾಕಿ, ಪಿರಂಗಿಗಳಿಗೆ ಎದೆಕೊಟ್ಟು ನಿಂತ ಸ್ವಾತಂತ್ರ್ಯ ಪ್ರೇಮಿಗಳ ಸತ್ಯಘಟನೆಯಾಧಾರಿತ “ಹಲಗಲಿ” ಚಿತ್ರದ ಟೀಸರನ್ನು ಸ್ವಾತಂತ್ರ್ಯ ದಿನದಂದೇ ವೀಕ್ಷಿಸಿದ್ದು ಹೆಚ್ಚು ಖುಷಿ ಕೊಟ್ಟಿತು.

ಚಿತ್ರದ ನಾಯಕ‌ನಟ ಡಾಲಿ ಧನಂಜಯ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆಗಳು. ನಮ್ಮ ಮಣ್ಣಿನ ಕತೆಯನ್ನು ಜನರೆದುರು ತರುವ ಈ ಪ್ರಯತ್ನವು ಯಶಸ್ಸು ಕಾಣಲಿ ಎಂದು ಸಿಎಂ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read