ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮೈಸೂರು ದಸರಾದ ದೀಪಾಲಂಕಾರ ವೀಕ್ಷಿಸಿ ಬಾಲ್ಯದ ನೆನಪು ಮಾಡಿಕೊಂಡರು.
ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘ನನ್ನೂರ ಐತಿಹಾಸಿಕ ದಸರಾದ ದೀಪಾಲಂಕಾರವನ್ನು ತೆರೆದ ಬಸ್ಸಿನಲ್ಲಿ ಪ್ರಯಾಣಿಸುತ್ತಾ ವೀಕ್ಷಿಸಿದೆ. ಬಾಲ್ಯದ ದಿನಗಳಿಂದ ಹಿಡಿದು ಇಂದಿನ ವರೆಗೂ ಪ್ರತಿ ಬಾರಿ ಮೈಸೂರು ದಸರಾದಲ್ಲಿ ನಾನು ಪಾಲ್ಗೊಂಡಾಗಲೂ ಅದೇ ಖುಷಿ, ಅದೇ ಸೊಗಸು. ಸಾಂಸ್ಕೃತಿಕ ನಗರಿ ಮೈಸೂರು ನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ದಸರೆಯ ಮೂಲಕ ತಲೆಮಾರುಗಳ ವರೆಗೆ ಮುನ್ನಡೆಸಿಕೊಂಡು ಹೋಗುತ್ತಿದೆ’ ಎಂದರು.
ವರ್ಷಗಳು ಉರುಳಿದಂತೆ ಧಾರ್ಮಿಕ ಆಚರಣೆಯೊಂದು ಎಲ್ಲರನ್ನೂ ಒಳಗೊಂಡ ಸಾಂಸ್ಕೃತಿಕ ಆಚರಣೆಯಾಗಿ, ಜನರ ಉತ್ಸವದಂತಾಗುತ್ತಿರುವುದು ಮತ್ತಷ್ಟು ಖುಷಿಯ ವಿಚಾರ. ದಸರಾದ ಯಶಸ್ಸಿಗೆ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
https://twitter.com/siddaramaiah/status/1844798639652438221