Mysore Dasara : ಈಗಲಾದರೂ ಮಳೆ ಬರಲಿ ಎಂದು ಪ್ರಾರ್ಥಿಸಿ ನಾಡಿನ ಜನತೆಗೆ ‘ದಸರಾ’ ಶುಭಾಶಯ ಕೋರಿದ ಸಿಎಂ

ಬೆಂಗಳೂರು : ಮೈಸೂರಿನಲ್ಲಿರುವ ಸಿಎಂ ಸಿದ್ದರಾಮಯ್ಯ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ.

‘’ರಾಜ್ಯದ ಜನರಿಗೆ ವಿಜಯದಶಮಿ ಹಾಗೂ ದಸರಾ ಮಹೋತ್ಸವದ ಶುಭಾಷಯಗಳು. ಮಧ್ಯಾಹ್ನ 1.45ಕ್ಕೆ ನಂದಿಧ್ವಜ ಪೂಜೆ ನೆರವೇರಲಿದೆ. ರಾತ್ರಿ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ. ರಾಜ್ಯದಲ್ಲಿ ಈ ಬಾರಿ ಮಳೆ ಬರಲಿಲ್ಲ, ವಿದ್ಯುತ್ ಕೊರತೆ ಆಯ್ತು. ರಾಜ್ಯದಲ್ಲಿ ಈಗಲಾದರೂ ಮಳೆ ಬರಲಿ ಅಂತ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಜಂಬೂಸವಾರಿಗೆ ಕೆಲ ಗಂಟೆಗಳು ಬಾಕಿ ಇದ್ದು, ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 11 ಐಪಿಎಸ್ ಅಧಿಕಾರಿಗಳು ಸೇರಿ 4,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಅರಮನೆ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read