BREAKING : ರಾಜ್ಯಾದ್ಯಂತ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗೆ ‘CM ಸಿದ್ದರಾಮಯ್ಯ’ ಚಾಲನೆ

ಬೆಂಗಳೂರು : ರಾಜ್ಯಾದ್ಯಂತ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗೆ ಸಿಎಂ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.

ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಮತ್ತು ಮಾಜಿ ದೇವದಾಸಿಯರ ಸಮಗ್ರ ಪುನರ್ವಸತಿಗಾಗಿ ಕರ್ನಾಟಕದಲ್ಲಿ ಮರು ಸಮೀಕ್ಷೆ ನಡೆಸಲು ಹಲವು ಸಂಸ್ಥೆಗಳು ಮತ್ತು ರಾಜಕಾರಣಿಗಳು ಒತ್ತಾಯಿಸಿದ್ದಾರೆ. ಇದಕ್ಕಾಗಿ, 45 ವರ್ಷಗಳ ವಯಸ್ಸಿನ ಮಿತಿಯನ್ನು ಕೈಬಿಟ್ಟು, ಎಲ್ಲಾ ವಯಸ್ಸಿನ ದೇವದಾಸಿಯರನ್ನು ಒಳಗೊಳ್ಳಬೇಕು ಮತ್ತು ಸಮೀಕ್ಷೆಯನ್ನು ಮನೆ-ಮನೆಗೆ ತೆರಳಿ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಈ ನಿಟ್ಟಿನಲ್ಲಿ ಸರ್ಕಾರ ದೇವದಾಸಿಯರ ಮರು ಸಮೀಕ್ಷೆಗೆ ನಿರ್ಧರಿಸಿದ್ದು, ಇಂದು ಸಿಎಂ ಚಾಲನೆ ನೀಡಿದರು.ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read