ಚಾಮರಾಜನಗರದಲ್ಲಿ ನೂತನ ‘ಇಂದಿರಾ ಕ್ಯಾಂಟೀನ್’ ಉದ್ಘಾಟಿಸಿ ಉಪಹಾರ ಸವಿದ ಸಿಎಂ ಸಿದ್ದರಾಮಯ್ಯ

ಚಾಮರಾಜನಗರ :   ಚಾಮರಾಜನಗರದ ಹನೂರಿನಲ್ಲಿ ನೂತನ ಇಂದಿರಾ ಕ್ಯಾಂಟೀನನ್ನು ಲೋಕಾರ್ಪಣೆಗೊಳಿಸಿ ಸಿಎಂ ಸಿದ್ದರಾಮಯ್ಯ ಉಪಹಾರ ಸವಿದರು.

ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ  ಬಡವರು, ಕೂಲಿಕಾರ್ಮಿಕರು, ರೋಗಿಗಳು, ಆಟೋ – ಕ್ಯಾಬ್ ಚಾಲಕರು, ಗಿಗ್ ಕಾರ್ಮಿಕರು ಹೀಗೆ ಆರ್ಥಿಕವಾಗಿ ಅಶಕ್ತರಾದ ಜನರಿಗೆ ರಿಯಾಯಿತಿ ದರದಲ್ಲಿ ಸ್ವಾದಿಷ್ಟ ಆಹಾರ ಒದಗಿಸಲು ನಮ್ಮ ಸರ್ಕಾರ ರೂಪಿಸಿ ಜಾರಿಗೆ ಕೊಟ್ಟ ಯೋಜನೆ ಇಂದಿರಾ ಕ್ಯಾಂಟೀನ್. ಮೊದಲು ಬೆಂಗಳೂರು ನಗರದಲ್ಲಿ ಆರಂಭಗೊಂಡ ಈ ಯೋಜನೆ ಅಪಾರ ಜನಮನ್ನಣೆ ಗಳಿಸಿದ್ದನ್ನು ನೋಡಿ ನಂತರ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಯಿತು.

ನಮ್ಮ ಈ ಯೋಜನೆ ಇಂದಿಗೂ ಸ್ವಚ್ಚ ಮತ್ತು ಗುಣಮಟ್ಟದ ಆಹಾರಕ್ಕೆ ಹೆಸರುವಾಸಿಯಾಗಿ, ಲಕ್ಷಾಂತರ ಜನರ ಹಸಿವು ನೀಗಿಸುತ್ತಿದೆ ಎನ್ನುವುದು ಸಂತಸದ ವಿಷಯ.  ಚಾಮರಾಜನಗರದ ಹನೂರಿನಲ್ಲಿ ಇಂದು ನೂತನ ಇಂದಿರಾ ಕ್ಯಾಂಟೀನನ್ನು ಲೋಕಾರ್ಪಣೆಗೊಳಿಸಿ, ಬಿಸಿ ಬಿಸಿಯಾದ ಉಪಹಾರ ಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read