ಮಂಗಳೂರು: ಮುಖ್ಯಮಂತ್ರಿ ಚಿನದ ಪದಕ ಪಡೆದ ಇನ್ಸ್ ಪೆಕ್ಟರ್ ಓರ್ವರ ವಿರುದ್ಧ ಚಿನ್ನದ ಸರ ಕದ್ದ ಆರೋಪ ಕೇಳಿಬಂದಿದೆ.
ಮಂಗಳೂರು ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಬಾಲಕೃಷ್ಣ ನಾಯಕ್ ವಿರುದ್ಧ ಆರೋಪಿಯ ಚಿನ್ನದ ಸರ ಕದ್ದ ಆರೋಪ ಕೇಳಿಬಂದಿದೆ. ಬಾಅಲಕೃಷ್ಣ ನಾಯಕ್ ಸಿಎಂ ಚಿನ್ನದ ಪದಕ ಗೆದ್ದ ಇನ್ಸ್ ಪೆಕ್ಟರ್.
ಪ್ರಕರಣವೊಂದನ್ನು ಮುಚ್ಚಿ ಹಾಕಲು 3 ಲಕ್ಷ ರೂಪಾಯಿ ಲಂಚ ಹಾಗೂ ಆರೋಪಿಯ ಮೈಮೇಲಿದ್ದ 50 ಗ್ರಾಂ ಚಿನ್ನವನ್ನು ಎಗರಿಸಿದ್ದಾರೆ ಎಂದು ಆರೋಪಿಸಿ ಬಾಲಕೃಷ್ಣ ವಿರುದ್ಧ ಎಸಿಪಿಗೆ ದೂರು ನೀಡಲಾಗಿದೆ. ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಅವರು ಮೈಸೂರಿನ ವಿಜಯನಗರದಲ್ಲಿದ್ದಾಗ ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ ಹಿನ್ನೆಲೆಯಲ್ಲಿ ಎಸಿಬಿ ದಾಳಿಗೂ ಒಳಗಾಗಿದ್ದರು.
ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಹಲವು ಆರೋಪಗಳಿದ್ದರೂ ಸಿಎಂ ಚಿನ್ನದ ಪದಕಕ್ಕೆ ಹೇಗೆ ಆಯ್ಕೆ ಆದರು? ಎಂಬುದು ಹಲವು ಅನುಮಾನಕ್ಕೆ ಕಾರಣವಗಿದೆ.