ನವದೆಹಲಿ: ದೆಹಲಿ ಕರ್ನಾಟಕ ಭವನದಲ್ಲಿ ಸಿಎಂ ಹಾಗೂ ಡಿಸಿಎಂ ವಿಶೇಷಾಧಿಕಾರಿಗಳೇ ಬೀದಿ ಜಗಳವಾಡಿರುವ ಘಟನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ಅವರ ವಿಶೇಶ ಕರ್ತವ್ಯ ಅದಿಕಾರಿ ಸಿ.ಮೋಹನ್ ಕುಮಾರ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಹೆಚ್.ಆಂಜನೇಯ ನಡುವೆ ಕಿತ್ತಾಟ ನಡೆದಿದೆ ಎನ್ನಲಾಗಿದೆ.
ಅಧಿಕಾರಿ ಸಿ.ಮೋಹನ್ ಕುಮಾರ್,ಅಧಿಕಾರಿ ಹೆಚ್.ಆಂಜನೇಯ ಅವರಿಗೆ ಬೂಟು ಕಳಚಿ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರಂತೆ. ಕರ್ನಾಟಕ ಭವನದಲ್ಲಿ ಇತರೆ ಸಿಬ್ಬಂದಿಗಳ ಎದುರಲ್ಲೇ ಈ ಘಟನೆ ನಡೆದಿದೆ. ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ಆಂಜನೇಯ ದೂರು ನೀಡಿದ್ದಾರೆ. ಕರ್ನಾಟಕ ಭವನ ನಿವಾಸಿ ಆಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.