ಪುರುಷರ ಈ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ʼಲವಂಗದ ಎಣ್ಣೆʼ

ಲವಂಗ, ಭಾರತದಲ್ಲಿ ಬಹುತೇಕ ಎಲ್ಲರೂ ಬಳಸುವಂತಹ ಮಸಾಲೆ ಪದಾರ್ಥ. ಪ್ರತಿ ಅಡುಗೆ ಮನೆಯಲ್ಲೂ ಸಿಕ್ಕೇ ಸಿಗುತ್ತದೆ. ಲವಂಗವನ್ನು ಆಯುರ್ವೇದ ಔಷಧಿ ಎಂದು ಪರಿಗಣಿಸಲಾಗುತ್ತದೆ. ಇದು ಬಹಳಷ್ಟು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಲವಂಗದಲ್ಲಿ ಅನೇಕ ಪೋಷಕಾಂಶಗಳು ಸಹ ಕಂಡುಬರುತ್ತವೆ.

ಇದು ದೇಹವನ್ನು ಬೆಚ್ಚಗಿಡುವ ಕೆಲಸ ಮಾಡುವುದಲ್ಲದೆ, ದೇಹದಲ್ಲಿರುವ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ಜೊತೆಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಪುರುಷರನ್ನು ಕಾಡುವ ಅನೇಕ ಸಮಸ್ಯೆಗಳಿಗೆ ಲವಂಗದಿಂದ ಪರಿಹಾರ ಸಿಗುತ್ತದೆ. ಲವಂಗದ ಎಣ್ಣೆ ಪುರುಷರಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ.

ಲವಂಗದ ಎಣ್ಣೆಯಲ್ಲಿ ಕಂಡುಬರುವ ಫ್ಲೇವನಾಯ್ಡ್‌ಗಳು ಮತ್ತು ಯುಜೆನಾಲ್ ಪುರುಷರನ್ನು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ರಕ್ಷಿಸುತ್ತವೆ. ಕ್ಯಾನ್ಸರ್ ಕೋಶಗಳು ಅದರಲ್ಲಿ ಬೆಳೆಯದಂತೆ ತಡೆಯುತ್ತದೆ. ಲವಂಗವು ಯಾವುದೇ ರೀತಿಯ ಮತ್ತನ್ನು ತೊಡೆದು ಹಾಕಲು ಪರಿಣಾಮಕಾರಿಯಾಗಿದೆ.

ನೀವು ಸಿಗರೇಟ್ ಅಥವಾ ಆಲ್ಕೋಹಾಲ್ ಚಟಕ್ಕೆ ಬಿದ್ದಿದ್ದರೆ ಅದನ್ನು ಬಿಡಲು ಲವಂಗ ಸಹಾಯ ಮಾಡಬಲ್ಲದು. ಲವಂಗ ತೈಲ ಹಚ್ಚಿಕೊಂಡು ಪ್ರತಿದಿನ ಬಿಸಿ ನೀರಲ್ಲಿ ಸ್ನಾನ ಮಾಡುವುದರಿಂದ ಕೆಟ್ಟ ಚಟವನ್ನು ಬಿಡುವುದು ಸುಲಭವಾಗುತ್ತದೆ. ಲವಂಗದ ಎಣ್ಣೆಯ ಬಳಕೆಯಿಂದ ರಕ್ತದ ಹರಿವು ಚೆನ್ನಾಗಿ ಆಗುತ್ತದೆ. ದೇಹದಲ್ಲಿ ಶಾಖ ಸರಿಯಾಗಿರುತ್ತದೆ. ಪರಿಣಾಮ ನೀವು ಒತ್ತಡ ಮುಕ್ತರಾಗಬಹುದು.

ಜೀವಸತ್ವಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳಂತಹ ಅನೇಕ ರೀತಿಯ ಅಗತ್ಯ ಪೋಷಕಾಂಶಗಳು ಲವಂಗದಲ್ಲಿ ಕಂಡುಬರುತ್ತವೆ.  ಇದು ಪುರುಷರಲ್ಲಿ ವೀರ್ಯ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಲವಂಗದ ಎಣ್ಣೆಯನ್ನು ಬಳಸುವುದು ಹೇಗೆ?

ಲವಂಗ ಎಣ್ಣೆಯನ್ನು ನಿಮ್ಮ ಕೋಣೆಯಲ್ಲಿ ಸಿಂಪಡಿಸಬಹುದು. ಇದರ ಸುಗಂಧವು ನಿಮ್ಮ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಲವಂಗದ ಎಣ್ಣೆಯನ್ನು ಅರೋಮಾ ಥೆರಪಿಯಲ್ಲಿಯೂ ಬಳಸಬಹುದು. ನಿಮ್ಮ ಮಾನಸಿಕ ಆರೋಗ್ಯದ ಜೊತೆಗೆ, ಇದು ಅನೇಕ ಇತರ ಸಮಸ್ಯೆಗಳನ್ನು ಕೂಡ ನಿವಾರಿಸುತ್ತದೆ.  ನಿಮಗೆ ಹಲ್ಲು ನೋವಿನ ಸಮಸ್ಯೆ ಇದ್ದರೆ ಲವಂಗದ ಎಣ್ಣೆಯನ್ನು ಬಳಸುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read