ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 13 ಯೋಧರನ್ನು ರಕ್ಷಿಸಲಾಗಿದೆ.
ಉತ್ತರಕಾಶಿಯ ಗಂಗೋತ್ರಿ ಜಲಾನಯನ ಪ್ರದೇಶದ ಧರಾಲಿಯಲ್ಲಿ ನಿನ್ನೆ ಸಂಭವಿಸಿದ ಮೇಘಸ್ಫೋಟ ಹಠಾತ್ ಪ್ರವಾಹದಲ್ಲಿ ಸೇನಾ ಕ್ಯಾಂಪ್ ಕೂಡ ನೆಲಸಮವಾಗಿತ್ತು. 13 ಯೋಧರು ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದ್ದರು. ಇದೀಗ 13 ಯೋಧರನ್ನು ರಕ್ಷಿಸಲಾಗಿದೆ.
ಪ್ರವಾಹಕ್ಕೆ ಸಿಲುಕಿ ಯೋಧರು ಗಾಯಗೊಂಡಿದ್ದು, ಗಾಯಾಳು ಯೋಧರನ್ನು ಏರ್ ಲಿಫ್ಟ್ ಮಾಡಲಾಗಿದೆ. ರಕ್ಷಿಸಲ್ಪಟ್ಟ ಯೋಧರನ್ನು ಐಟಿಬಿಪಿ ಕ್ಯಾಂಪ್ ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.