ಹೇರ್ ಸ್ಪ್ರೇ ಬಳಸಿ ಈ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ….!

ಹುಡುಗಿಯರು ಕೂದಲು ಆಕರ್ಷಕವಾಗಿ ಕಾಣಲು ಕೇಶ ವಿನ್ಯಾಸಕ್ಕಾಗಿ ಹೇರ್ ಸ್ಪ್ರೇಯನ್ನು ಬಳಸುತ್ತಾರೆ. ಆದರೆ ಈ ಹೇರ್ ಸ್ಪ್ರೇ ಇನ್ನು ಹಲವು ಕೆಲಸಗಳಿಗೆ ಉಪಯೋಗವಾಗುತ್ತದೆ. ಅಂತಹ ಕೆಲಸಗಳು ಯಾವುದೆಂಬುದನ್ನು ತಿಳಿಯೋಣ.

*ಬೆಳ್ಳಿ ಮತ್ತು ಲೋಹದ ಪಾತ್ರೆಗಳನ್ನು ಹೊಳೆಯುವಂತೆ ಮಾಡಲು ಹೇರ್ ಸ್ಪ್ರೇ ಸಿಂಪಡಿಸಿ ಬಟ್ಟೆಯಿಂದ ಉಜ್ಜಿ. ಇದರಿಂದ ಪಾತ್ರೆಗಳು ತಳತಳ ಹೊಳೆಯುತ್ತದೆ.

*ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುವಾಗ ಅದು ನೆಲದ ಮೇಲೆ ಬಿದ್ದಾಗ ಅದನ್ನು ತಕ್ಷಣ ಒರೆಸಬೇಕು. ಇಲ್ಲವಾದರೆ ಅದು ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಈ ನೈಲ್ ಪಾಲಿಶ್ ಕಲೆಗಳನ್ನು ತೆಗೆಯಲು ಹೇರ್ ಸ್ಪ್ರೇ ಬಳಸಿ ಸ್ವಚ್ಛ ಮಾಡಬಹುದು.

*ಮನೆಯ ಗೋಡೆಗಳ ಮೇಲೆ ಮಕ್ಕಳು ಇಂಕ್ ನಿಂದ ಬರೆದಿರುತ್ತಾರೆ ಅಥವಾ ಇಂಕ್ ಕಲೆ ಬಿದ್ದಿರುತ್ತದೆ. ಇದನ್ನು ಸುಲಭವಾಗಿ ತೆಗೆಯಲು ಹೇರ್ ಸ್ಪ್ರೇ ಸಿಂಪಡಿಸಿ ಒರೆಸಿದರೆ ಕಲೆ ಮಾಯವಾಗುತ್ತದೆ.

*ಚರ್ಮದ ಬೂಟುಗಳನ್ನು ಮತ್ತು ಲೆದರ್ ವಸ್ತುಗಳ ಮೆಲಿರುವ ಕಲೆಗಳನ್ನು ನಿವಾರಿಸಲು ಹೇರ್ ಸ್ಪ್ರೇ ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read