SHOCKING : ‘SSLC’ ವಿದ್ಯಾರ್ಥಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ 9 ನೇ ತರಗತಿ ಬಾಲಕ, ವ್ಯಾಪಕ ಆಕ್ರೋಶ|WATCH VIDEO

ಗುಜರಾತ್ : ಅಹಮದಾಬಾದ್ನಲ್ಲಿ 15 ವರ್ಷದ 10 ನೇ ತರಗತಿಯ ವಿದ್ಯಾರ್ಥಿಯನ್ನು ಒಂಬತ್ತನೇ ತರಗತಿಯ ಬಾಲಕನೊಬ್ಬ ಇರಿದು ಕೊಂದಿದ್ದು, ನಂತರ ಖಾಸಗಿ ಶಾಲೆಯ ಹೊರಗೆ ಬೃಹತ್ ಪ್ರತಿಭಟನೆ ಭುಗಿಲೆದ್ದಿತು.

ಚಾಕು ಇರಿತಕ್ಕೊಳಗಾದ ಬಾಲಕನನ್ನು ಮಂಗಳವಾರ ರಾತ್ರಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.

ಇರಿತಕ್ಕೊಳಗಾದ ವಿದ್ಯಾರ್ಥಿ ಸಿಂಧಿ ಸಮುದಾಯಕ್ಕೆ ಸೇರಿದವನಾಗಿದ್ದು, ಸಾವಿನ ಸುದ್ದಿ ತಿಳಿದ ನಂತರ, ಬೆಳಿಗ್ಗೆ ಮುಂಜಾನೆ ಸಮುದಾಯದ ಹೆಚ್ಚಿನ ಸಂಖ್ಯೆಯ ಸದಸ್ಯರು ಶಾಲೆಯಲ್ಲಿ ಜಮಾಯಿಸಿದರು. ಆರೋಪಿ ಬಾಲಕ ಮುಸ್ಲಿಂ ಸಮುದಾಯಕ್ಕೆ ಸೇರಿದವನು .ಈ ಘಟನೆಯು ವಿದ್ಯಾರ್ಥಿಯ ಪೋಷಕರು, ಹಿಂದೂ ಸಂಘಟನೆಗಳು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಪ್ರತಿಭಟನಾಕಾರರು ಶಾಲಾ ಆವರಣಕ್ಕೆ ನುಗ್ಗಿ ವಸ್ತುಗಳನ್ನು ಧ್ವಂಸ ಮಾಡಿ ಶಾಲಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read