ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯೊಬ್ಬ 500 ಹುಡುಗಿಯರ ಮಧ್ಯೆ ತಾನು ಒಬ್ಬನೇ ಹುಡುಗ ಎಂದು ತಿಳಿಯುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಬಿಹಾರದಲ್ಲಿ ನಡೆದಿದೆ.
12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಣಿ ಶಂಕರ್ ಎಂಬಾತ ಆಲಂ ಇಕ್ಬಾಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದು, ಬ್ರಿಲಿಯಂಟ್ ಸ್ಕೂಲ್ ನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ.
ದೊಡ್ಡ ಹಾಲ್ ಪ್ರವೇಶಿಸುತ್ತಿದ್ದಂತೆ ಅಲ್ಲಿ ಬರಿ ಹುಡುಗಿಯರೇ ಇರುವುದನ್ನು ಕಂಡು ಆತ ಹೌಹಾರಿದ್ದಾನೆ. ಇದರಿಂದ ಗಾಬರಿಯಾಗಿ ಕೆಲವೊತ್ತು ಆತನಿಗೆ ಪ್ರಜ್ಞೆ ತಪ್ಪಿದೆ. ಜ್ವರ ಕೂಡ ಬಂದಿದ್ದು, ಆತನನ್ನು ಸದಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
https://twitter.com/kumarprakash4u/status/1620725291017707520?ref_src=twsrc%5Etfw%7Ctwcamp%5Etweetembed%7Ctwterm%5E1620725291017707520%7Ctwgr%5E697ff25e93ad3877453e7e0082331171a9fa7a83%7Ctwcon%5Es1_&ref_url=https%3A%2F%2Fwww.india.com%2Fbihar%2Fclass-12-student-bihar-faints-after-finding-himself-around-500-girls-exam-centre-5879899%2F