Watch Video | ಉಗ್ರವಾಗಿ ಕಾದಾಡಿದ ಆನೆಗಳು; ವಿಡಿಯೋ ನೋಡಿ ದಿಗ್ಭ್ರಮೆಗೊಂಡ ನೆಟ್ಟಿಗರು

ದೈತ್ಯ ಜೀವಿಯಾದರೂ ಆನೆಗಳನ್ನು ಬಹಳ ಸೌಮ್ಯ ಜೀವಿಗಳೆಂದೇ ಕರೆಯಲಾಗುತ್ತದೆ. ಇದರ ವಿಡಿಯೋಗಳನ್ನು ನೋಡಲು ಬಹಳ ಕ್ಯೂಟ್ ಎಂದೆನಿಸಿದರೂ, ಕೆಲವೊಮ್ಮೆ ಆಕ್ರಮಣಕಾರಿಯಾಗಿ ವರ್ತಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಎರಡು ಆನೆಗಳು ಭೀಕರ ಕಾಳಗದಲ್ಲಿ ತೊಡಗಿರುವುದು ಬಳಕೆದಾರರನ್ನು ಬೆಚ್ಚಿ ಬೀಳಿಸುತ್ತದೆ.

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸಾಕೇತ್ ಬಡೋಲಾ ಅವರು ಹಂಚಿಕೊಂಡ ವಿಡಿಯೋದಲ್ಲಿ, ಎರಡೂ ಆನೆಗಳು ಪರಸ್ಪರ ತಳ್ಳುತ್ತಿರುವುದನ್ನು ತೋರಿಸುತ್ತದೆ. ಪರಸ್ಪರರನ್ನು ಸೋಲಿಸಲು ತಮ್ಮ ದೊಡ್ಡ ದಂತಗಳೊಂದಿಗೆ ಹೋರಾಡಿವೆ. ಚಲಿಸುತ್ತಿದ್ದ ವಾಹನದಿಂದ ಈ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ಕ್ಲಾಶ್ ಆಫ್ ಟೈಟಾನ್ಸ್ ಎಂದು ಶೀರ್ಷಿಕೆ ನೀಡಲಾಗಿದೆ.

ಎರಡು ಆನೆಗಳ ನಡುವಿನ ಕಾದಾಟಕ್ಕೆ ಕೆಲವರು ಆಶ್ಚರ್ಯ ಪಡುತ್ತಿದ್ದರೆ, ಇನ್ನೂ ಕೆಲವರನ್ನು ಇದು ದಿಗ್ಭ್ರಮೆಗೊಳಿಸಿದೆ. ಹಂಚಿಕೊಂಡಾಗಿನಿಂದ ಈ ವಿಡಿಯೋ 31,000ಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್, ಎರಡು ಮರಿ ಆನೆಗಳು ಪರಸ್ಪರ ಕಾದಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಕೂಡ ಭಾರಿ ವೈರಲ್ ಆಗಿದೆ.

https://twitter.com/Saket_Badola/status/1654044459791949825?ref_src=twsrc%5Etfw%7Ctwcamp%5Etweetembed%

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read