ಬೆಂಗಳೂರು : ಕಾಲಲ್ಲಿ ಶೂ ಧರಿಸಿ ಸಿಟಿ ರವಿ ರಾಮಭಜನೆ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿಯವರ ಧಾರ್ಮಿಕತೆ ಬೂಟಾಟಿಕೆಯದ್ದು , ಸಿಟಿ ರವಿ ಕಾಲಲ್ಲಿರುವ ಬೂಟು ಸಾಕ್ಷಿ ಹೇಳುತ್ತಿದೆ.. ಬಾಯಲ್ಲಿ ಭಜನೆ, ಮನದಲ್ಲಿ ಆತ್ಮವಂಚನೆ, ಕಾಲಲ್ಲಿ ಬೂಟು, ಜೇಬಲ್ಲಿ ಅಕ್ರಮದ ನೋಟು! ಇದು ಬಿಜೆಪಿಗರ ವರಸೆ.. ರಾಮ ಬಿಜೆಪಿಗೆ ರಾಜಕೀಯ ಸರಕೇ ಹೊರತು ಭಕ್ತಿಯಲ್ಲ, ರಾಮನ ಬಗ್ಗೆ ನಿಜಕ್ಕೂ ಗೌರವ ಭಕ್ತಿ ಇದ್ದಿದ್ದರೆ ಕಾಲಿನಲ್ಲಿ ಬೂಟು ಧರಿಸಿಕೊಂಡು ಭಜನೆ ಮಾಡುತ್ತಿರಲಿಲ್ಲ, ಎಷ್ಟೇ ಆದರೂ ಶೂ ಧರಿಸಿ ದೇವಸ್ಥಾನಕ್ಕೆ ನುಗ್ಗಿದವರಲ್ಲವೇ ಸಿಟಿ ರವಿ ಎಂದು ಕಾಂಗ್ರೆಸ್ ಕಾಲೆಳೆದಿದೆ.
https://twitter.com/INCKarnataka/status/1743213213486043379