ಸಿಟಿ ಕೋ – ಆಪರೇಟಿವ್ ಚುನಾವಣಾ ಕಣದಿಂದ ಹಿಂದೆ ಸರಿದಿಲ್ಲ: ಸುನಿಲ್ ಕುಮಾರ್ ಸ್ಪಷ್ಟನೆ

ಡಿಸೆಂಬರ್‌ 29 ರ ಭಾನುವಾರದಂದು ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕೋ – ಆಪರೇಟಿವ್‌ ಬ್ಯಾಂಕ್‌ ಗೆ ಚುನಾವಣೆ ನಡೆಯಲಿದ್ದು, ಇದೀಗ ಅಭ್ಯರ್ಥಿಗಳಿಗೆ ಚಿಹ್ನೆ ನೀಡಲಾಗಿದೆ.

ಈ ಚುನಾವಣೆಯಲ್ಲಿ ಮರಾಠ ಸಮಾಜದ ಪ್ರಮುಖರು ಹಾಗೂ SRS ಬೋರ್ವೆಲ್ಸ್ ಮಾಲೀಕರಾದ ಎಸ್. ಸುನಿಲ್‌ ಕುಮಾರ್‌ ಸ್ಪರ್ಧಿಸಿದ್ದು, ಅವರಿಗೆ ಕ್ರಮ ಸಂಖ್ಯೆ – 28, ಶಟಲ್ ಕಾಕ್ ಚಿಹ್ನೆ ನೀಡಲಾಗಿದೆ.

ಇದರ ಮಧ್ಯೆ ಕೆಲವರು ಸುನಿಲ್ ಕುಮಾರ್ ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು, ಇದಕ್ಕೆ ಸ್ಪಷ್ಟನೆ ನೀಡಿರುವ ಸುನಿಲ್ ಕುಮಾರ್, ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೇ, ಈ ಚುನಾವಣೆಯಲ್ಲಿ ತಮ್ಮ ಚಿಹ್ನೆಯಾದ ಕ್ರಮ ಸಂಖ್ಯೆ 28 ರ ʼಶಟಲ್‌ ಕಾಕ್‌ʼ ಗುರುತಿಗೆ ಮತ ನೀಡುವ ಮೂಲಕ ಬೆಂಬಲಿಸುವಂತೆ ಸಿಟಿ ಕೋ – ಆಪರೇಟಿವ್‌ ಬ್ಯಾಂಕ್‌ ಸದಸ್ಯರಲ್ಲಿ ಮನವಿ ಮಾಡಿರುವ ಸುನಿಲ್‌ ಕುಮಾರ್, ತಾವು ಆಯ್ಕೆಯಾದರೆ ಷೇರುದಾರರ ಹಿತ ಕಾಪಾಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ.

ಸಿಟಿ ಕೋ – ಆಪರೇಟಿವ್ ಬ್ಯಾಂಕ್ ಚುನಾವಣೆಯು ಡಿಸೆಂಬರ್ 29 ರ ಭಾನುವಾರ ಶಿವಮೊಗ್ಗ ನಗರದ ನ್ಯಾಷನಲ್ ಬಾಯ್ಸ್‌ ಹೈಸ್ಕೂಲ್ ಆವರಣದಲ್ಲಿ ನಡೆಯಲಿದ್ದು, ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read