ಜುಲೈ 12ರಿಂದ ಬಂದ್‌ ಆಗಲಿದೆ ಸಿಟಿ ಬ್ಯಾಂಕ್‌ ಆನ್‌ಲೈನ್‌ ವಹಿವಾಟು; ಇಲ್ಲಿದೆ ಗ್ರಾಹಕರಿಗೆ ಮಹತ್ವದ ಮಾಹಿತಿ…!

ಸಿಟಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಹಿಂದಿನ ಚಿಲ್ಲರೆ ಬ್ಯಾಂಕಿಂಗ್ ಗ್ರಾಹಕರಿಗೆ ಸಿಟಿ ಬ್ಯಾಂಕ್ ಆನ್‌ಲೈನ್ ಜುಲೈ 12 ರಿಂದ ಕಾರ್ಯನಿರ್ವಹಿಸುವುದಿಲ್ಲ. ಅದನ್ನು ಬಂದ್‌ ಮಾಡುವುದಾಗಿ ಬ್ಯಾಂಕ್ ತಿಳಿಸಿದೆ. ಆಕ್ಸಿಸ್ ಬ್ಯಾಂಕ್, ಸಿಟಿ ಬ್ಯಾಂಕ್‌ನ ಭಾರತೀಯ ಗ್ರಾಹಕ ಬ್ಯಾಂಕಿಂಗ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡಿರುವುದೇ ಇದಕ್ಕೆ ಕಾರಣ. ಇದರ ಅಡಿಯಲ್ಲಿ ಗ್ರಾಹಕರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಸಿಟಿ ಬ್ಯಾಂಕ್‌ನ ಚಿಲ್ಲರೆ ವ್ಯಾಪಾರವು ಕ್ರೆಡಿಟ್ ಕಾರ್ಡ್, ಗೃಹ ಮತ್ತು ಸಿಬ್ಬಂದಿ ಸಾಲ, ರಿಟೇಲ್ ಬ್ಯಾಂಕಿಂಗ್, ವಿಮಾ ಸೇವೆಗಳನ್ನು ಒಳಗೊಂಡಿದೆ. ಆಕ್ಸಿಸ್ ಬ್ಯಾಂಕ್ ಪ್ರಕಾರ, ಸಿಟಿ ಬ್ಯಾಂಕ್ ಆನ್‌ಲೈನ್‌ನ ಶಿಫ್ಟಿಂಗ್‌ ಜುಲೈ 15 ರೊಳಗೆ ಪೂರ್ಣಗೊಳ್ಳುತ್ತದೆ.

ಬಳಕೆದಾರರು ಹೆಚ್ಚಿನ ಮಾಹಿತಿಗಾಗಿ ಜುಲೈ 15ರಿಂದ ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸಿಟಿ ಬ್ಯಾಂಕ್ ಗ್ರಾಹಕರಿಗೆ ಈಗ ಆಕ್ಸಿಸ್ ಬ್ಯಾಂಕ್ ಸೇವೆ ನೀಡಲಿದೆ. ಸಿಟಿ ಇಂಡಿಯಾ ತನ್ನ ಗ್ರಾಹಕರ ಬ್ಯಾಂಕಿಂಗ್ ವ್ಯವಹಾರದ ಮಾಲೀಕತ್ವವನ್ನು ಆಕ್ಸಿಸ್ ಬ್ಯಾಂಕ್‌ಗೆ ವರ್ಗಾಯಿಸಿದೆ.

ಏನಾಗಲಿವೆ ಎಟಿಎಂ ಸೇರಿದಂತೆ ಇತರ ಸೇವೆಗಳು?

ಸಿಟಿ ಬ್ಯಾಂಕ್ ಗ್ರಾಹಕರು ಶಾಖೆ, ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಬ್ಯಾಂಕ್ ಒದಗಿಸಿದ ಎಲ್ಲಾ ಸೇವೆಗಳನ್ನು ಮೊದಲಿನಂತೆ ಬಳಸುವುದನ್ನು ಮುಂದುವರಿಸಬಹುದು. ಕಾರ್ಡ್‌ಗಳು ಸೇರಿದಂತೆ ಎಲ್ಲಾ ಸೇವೆಗಳ ಶಿಫ್ಟಿಂಗ್‌ ಅನ್ನು ಜುಲೈ 15 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ.

ಈ ಗಡುವಿನಲ್ಲಿ ಯಾವುದೇ ಬದಲಾವಣೆಯಾದಲ್ಲಿ ಮಾಹಿತಿ ನೀಡುವುದಾಗಿಯೂ ಬ್ಯಾಂಕ್‌ ಹೇಳಿಕೊಂಡಿದೆ. ಜುಲೈ 15ರಿಂದ ಗ್ರಾಹಕರು Axis ಬ್ಯಾಂಕ್ ಕಾರ್ಡ್‌ಗಳನ್ನು ಬಳಸಬಹುದು. Citibank ಕಾರ್ಡ್ ಅಲ್ಲಿಯವರೆಗೆ ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ. ಶಿಫ್ಟಿಂಗ್‌ ಬಳಿಕ ಕೆಲವು ತಿಂಗಳುಗಳಲ್ಲಿ ಹೊಸ ಆಕ್ಸಿಸ್ ಬ್ಯಾಂಕ್ ಕಾರ್ಡ್ ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲ ಶಿಫ್ಟಿಂಗ್‌ ಬಳಿಕ ಸಿಟಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಸೌಲಭ್ಯಗಳಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. ಕ್ರೆಡಿಟ್ ಕಾರ್ಡ್ ಮಿತಿಯಲ್ಲಿ ಸಹ ಯಾವುದೇ ಬದಲಾವಣೆ ಇರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read