ಹೃದಯದಿಂದ ಮೆದುಳಿನವರೆಗೆ ಎಲ್ಲವನ್ನೂ ಆರೋಗ್ಯವಾಗಿಡುತ್ತದೆ ಚಾಕಲೇಟ್‌; ಸೇವನೆಯ ಪ್ರಮಾಣ ತಿಳಿಯಿರಿ…!

ಸದ್ಯ ಪ್ರೇಮಿಗಳು, ಪರಸ್ಪರ ಪ್ರೀತಿಪಾತ್ರರ ಮಧ್ಯೆ ಚಾಕಲೇಟ್‌ ದಿನದ ಸಡಗರವಿದೆ. ಚಾಕಲೇಟ್‌, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಫೇವರಿಟ್. ಬಾಯಿ ಸಿಹಿ ಮಾಡುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ.

ಆದರೆ ಸೂಕ್ತವಾದ ಚಾಕಲೇಟ್‌ ಅನ್ನು ಸರಿಯಾದ ಪ್ರಮಾಣದಲ್ಲಿ ತಿನ್ನುವುದು ಮುಖ್ಯ. ಮಾರುಕಟ್ಟೆಯಲ್ಲಿ ಲಭ್ಯವಿರುವ  ಎಲ್ಲಾ ಚಾಕಲೇಟ್‌ಗಳು ಆರೋಗ್ಯಕರವಲ್ಲ. ಡಾರ್ಕ್ ಚಾಕಲೇಟ್ ಅನ್ನು ಮಾತ್ರ ಸೇವಿಸಬೇಕು.

ಡಾರ್ಕ್ ಚಾಕಲೇಟ್‌ ಪ್ರಯೋಜನಗಳು

ಹೃದಯ ಸಂಬಂಧಿ ರೋಗವನ್ನು ತಡೆಯುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ಪ್ರಯೋಜನಕಾರಿ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಪ್ರಯೋಜನಕಾರಿ.

ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ.

ಅಧ್ಯಯನದ ಪ್ರಕಾರ ಮಿತವಾಗಿ ಡಾರ್ಕ್‌ ಚಾಕಲೇಟ್‌ ತಿಂದರೆ ತೂಕವನ್ನು ನಿಯಂತ್ರಿಸಿಕೊಳ್ಳಬಹುದು. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದಕ್ಕಾಗಿ ನಿಗದಿತ ಪ್ರಮಾಣದಲ್ಲಿ ತಿನ್ನುವುದು ಅವಶ್ಯಕ. ಪ್ರತಿದಿನ ಒಂದು ಚಿಕ್ಕ ತುಂಡನ್ನು ಮಾತ್ರ ಸೇವಿಸಿದರೆ ಅದು ಅಮೃತವಾಗುತ್ತದೆ. ಅತಿಯಾದ ಸೇವನೆ ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read