ನಿತಿನ್ ಜೊತೆ ರಶ್ಮಿಕಾ ಮಂದಣ್ಣ ಹೊಸ ಚಿತ್ರಕ್ಕೆ ಕ್ಲಾಪ್ ಮಾಡಿದ ಚಿರಂಜೀವಿ

ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ನಟ ನಿತಿನ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರ ಹೊಸ ಚಿತ್ರದ ಮುಹೂರ್ತ ಶಾಟ್ ಗೆ ಮೆಗಾಸ್ಟಾರ್ ಚಿರಂಜೀವಿ ಕ್ಲಾಪ್‌ ಮಾಡಿದರು.

ಭೀಷ್ಮಾ ನಂತರ ನಿತಿನ್ ಜೊತೆ ರಶ್ಮಿಕಾ ಅವರ ಎರಡನೇ ಚಿತ್ರ ಇದಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ರಶ್ಮಿಕಾ ಚಿತ್ರದ ಸೆಟ್ ನಲ್ಲಿ ನಡೆದ ಪೂಜಾ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ಬಾಬಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ರೆ, ಗೋಪಿಚಂದ್ ಮಲಿನೇನಿ ಮೊದಲ ಶಾಟ್ ನಿರ್ದೇಶಿಸಿದ್ದಾರೆ.

ಜನವರಿ 20 ರಂದು ನೆಟ್‌ಫ್ಲಿಕ್ಸ್ ನಲ್ಲಿ ಪ್ರಥಮ ಪ್ರದರ್ಶನಗೊಂಡ ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ರಶ್ಮಿಕಾ ಅವರು ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸಂದೀಪ್ ವಂಗಾ ನಿರ್ದೇಶಿಸಿದ್ದಾರೆ. ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read