‘ನಾನೂ ಉಸಿರುಗಟ್ಟಿ ಅಸ್ವಸ್ಥನಾಗಿದ್ದೆ’ : ಬೆಂಗಳೂರು ಕಾಲ್ತುಳಿತ ದುರಂತದ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ.!

ಬೆಂಗಳೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ಘಟನೆಯ ವೇಳೆ ಗಾಯಕ ಚಂದನ್ ಶೆಟ್ಟಿ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದ್ದರು. ದುರಂತದ ಕರಾಳ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

ಆರ್ ಸಿಬಿ ವಿಜಯೋತ್ಸವ ಹಿನ್ನೆಲೆಯಲ್ಲಿ ನಾನೂ ಕೂಡ ಖುಷಿಯಿಂದ ಸ್ಟೆಡಿಯಂನ ಗೇಟ್ ನಂ. 3ರ ಬಳಿ ಹೋಗಿದ್ದೆ. ಆದರೆ ಗೇಟ್ ಸಮೀಪಕ್ಕೂ ಹೋಗಲು ಆಗಲಿಲ್ಲ. ಅಷ್ಟೊಂದು ಜನ ಸಾಗರವಿತ್ತು. ಬಳಿಕ ಗೇಟ್ ನಂ.10ರ ಬಳಿ ಬಂದೆ ಅಲ್ಲಿ ನನಗೆ ಉಸಿರಾಡಲು ಕಷ್ಟವಾಯಿತು. ಕಾಲಿಡಲೂ ಜಾಗವಿರಲಿಲ್ಲ ನೂಕು ನುಗ್ಗಲಿನಲ್ಲಿ ನನಗೂ ಉಸಿರುಗಟ್ಟಿ ಅಸ್ವಸ್ಥನಾಗುವ ಸ್ಥಿತಿ ಎದುರಾಯಿತು ಎಂದು ಹೇಳಿದ್ದಾರೆ.

ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಹೇಗೆ ಹೇಳುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಆಸ್ಪತ್ರೆಗೆ ದಾಖಲಾಗಿರುವವರು ಬೇಗಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read