ಒಂದೇ ಚಾಟಿಯೇಟಿನಲ್ಲಿ ಉರಿಯುತ್ತಿರುವ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲೇ ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ.

ಚಾಟಿಯೊಂದನ್ನು ಒಂದೇ ಬಾರಿ ಬೀಸಿ, ಒಮ್ಮೆಲೇ ಉರಿಯುತ್ತಿರುವ 42 ಮೋಂಬತ್ತಿಗಳನ್ನು ಆರಿಸಿದ ಶುವಾನ್‌ಫೆಯಿ ನೂತನ ಗಿನ್ನೆಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಒಂದೇ ಚಾಟಿ ಏಟಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮೋಂಬತ್ತಿಗಳನ್ನು ಆರಿಸಿದ ದಾಖಲೆಯನ್ನು ಶುವಾನ್‌ಫಾಯಿ ತಮ್ಮದಾಗಿಸಿಕೊಂಡಿದ್ದಾರೆ.

ಶುವಾನ್‌ಫೇಯಿರ ಈ ಸಾಹಸವನ್ನು ನಿಧಾನ ಗತಿಯ ವಿಡಿಯೋದಲ್ಲಿ ತೋರುತ್ತಿರುವ ಪೋಸ್ಟ್ ಶೇರ್‌ ಮಾಡಿದ ಗಿನ್ನೆಸ್ ವಿಶ್ವ ದಾಖಲೆಗಳ ಟ್ವಿಟರ್‌ ಪುಟವು, “ಈ ದಾಖಲೆಯನ್ನು ನಮ್ಮ ತಂಡ ರಾತ್ರೋರಾತ್ರಿ ಮಾನ್ಯೀಕರಿಸಿದೆ: ಒಂದೇ ಚಾಟಿ ಏಟಿಗೆ ಅತಿ ಹೆಚ್ಚು ಮೋಂಬತ್ತಿಗಳನ್ನು ಆರಿಸಿರುವುದು – ಚೀನಾದ ವಾಂಗ್‌ ಶೂವಾನ್‌ಫೇಯಿರಿಂದ 42. ಈ ಸ್ಲೋ-ಮೋ ಶೆಫ್‌ರ ಕಿಸ್ ಅಷ್ಟೇ,” ಎಂದು ಪೋಸ್ಟ್ ಮಾಡಿದೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನ ಆಂಟೋನಿ ಕೆಲ್ಲಿ ಒಂದೇ ಒಂದು ಕೈಬೀಸುವಿಕೆಯಲ್ಲಿ 37 ಮೋಂಬತ್ತಿಗಳನ್ನು ಆರಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read