ಸಾಹಸ ಪ್ರದರ್ಶಿಸುತ್ತಿದ್ದ ವೇಳೆಯಲ್ಲೆ ಬಿದ್ದು ಮೃತಪಟ್ಟ ಮಹಿಳಾ ಕಲಾವಿದೆ; ಭಯಾನಕ ವಿಡಿಯೋ ವೈರಲ್

ರಿಯಾಲಿಟಿ ಶೋಗಳು ನೋಡಲು ಆಕರ್ಷಕವಾಗಿದ್ದರೂ ಸಹ ಪ್ರದರ್ಶಕರು ಕೊಂಚ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಚೀನಾದಲ್ಲಿ ದಂಪತಿಯು ಈ ರೀತಿಯ ಸಾಹಸ ಶೋ ಪ್ರದರ್ಶಿಸುತ್ತಿದ್ದಾಗ ಸಂಗಾತಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಚೀನಾದ ಸುಝೌ ನಗರದಲ್ಲಿ ದಂಪತಿಯು ಪ್ರದರ್ಶನ ಮಾಡುತ್ತಿದ್ರು. ಲೈವ್ ಶೋನಲ್ಲಿ ತನ್ನ ಪತಿಯೊಂದಿಗೆ ಎತ್ತರಕ್ಕೆ ತೂಗಾಡುತ್ತಿದ್ದ ಮಹಿಳಾ ಕಲಾವಿದೆ ಪ್ರದರ್ಶನದಲ್ಲಿ ಕೈ ಜಾರಿ ಬಲವಾಗಿ ಕೆಳಕ್ಕೆ ಬಿದ್ದಿದ್ದಾಳೆ. ಪರಿಣಾಮ ದುರ್ಘಟನೆಯಲ್ಲಿ ಆಕೆ ಮೃತಪಟ್ಟಿದ್ದಾಳೆ.

ಸನ್ ಎಂಬ ಹೆಸರಿನ ಮಹಿಳೆ ಶನಿವಾರ ತನ್ನ ಪತಿಯೊಂದಿಗೆ ವೇದಿಕೆಯಲ್ಲಿ ಪ್ರದರ್ಶನ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊರೆದೊಯ್ಯಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟಿದ್ದಾಳೆ.

ಈ ರೀತಿಯ ಚಮತ್ಕಾರಿ ಪ್ರದರ್ಶನ ನಿಜವಾಗಿಯೂ ಅಪಾಯಕಾರಿ. ಕನಿಷ್ಠ ಸುರಕ್ಷತಾ ಜಾಲವನ್ನಾದ್ರೂ ಕೆಳಗೆ ಇರಿಸಿ ಪ್ರದರ್ಶನ ಮಾಡಿದ್ರೆ ಪ್ರಾಣವಾದ್ರೂ ಉಳಿಯುತ್ತದೆ. ಹೀಗಾಗಿ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯ.

https://twitter.com/sirajnoorani/status/1647676392644165632?ref_src=twsrc%5Etfw%7Ctwcamp%5Etweetembed%7Ctwterm%5E1647676392644165632%7Ctwgr%5Ee926bd99a1c08e1414500839419b4c81d0c30728%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fchina-artiste-falls-from-height-while-performing-acrobat-show-with-husband-dies-after-rescue-work-fails

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read