ಬೀಜಿಂಗ್: ಶೇ.104 ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಚೀನಾ ತಿರುಗೇಟು ನೀಡಿದ್ದು, ಅಮೆರಿಕದ ಎಲ್ಲಾ ಆಮದು ಮೇಲೆ ಶೇ.84 ತೆರಿಗೆ ವಿಧಿಸಿದೆ.
ಯುಎಸ್ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಉಲ್ಬಣಗೊಳ್ಳುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ವಿಧಿಸುವ ಭರಾಟೆಯಲ್ಲಿದ್ದಾರೆ. ಚೀನಾ ತನ್ನ ಇತ್ತೀಚಿನ ಕ್ರಮದಲ್ಲಿ, ಅಮೆರಿಕದ ಎಲ್ಲಾ ಉತ್ಪನ್ನಗಳ ಮೇಲೆ ಶೇ.84 ಸುಂಕವನ್ನು ವಿಧಿಸಿದೆ. ಗುರುವಾರದಿಂದ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವುದಾಗಿ ಘೋಷಿಸಿದ ಚೀನಾ “ಕೊನೆಯವರೆಗೂ ಹೋರಾಡಲು” ಪ್ರತಿಜ್ಞೆ ಮಾಡಿದೆ.
ಇತ್ತೀಚಿನ ಕ್ರಮವನ್ನು ಘೋಷಿಸುವಾಗ ಚೀನಾದ ಹಣಕಾಸು ಸಚಿವಾಲಯವು ಹೊಸ ಶುಲ್ಕಗಳು ಏಪ್ರಿಲ್ 10 ರಿಂದ ಜಾರಿಗೆ ಬರಲಿವೆ ಎಂದು ಪ್ರತಿಪಾದಿಸಿದೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅಮೆರಿಕದ ವಿರುದ್ಧ ಹೆಚ್ಚುವರಿ ಮೊಕದ್ದಮೆ ಹೂಡುವುದಾಗಿ ಮತ್ತು ಚೀನಾದ ಕಂಪನಿಗಳೊಂದಿಗೆ ಅಮೆರಿಕದ ಕಂಪನಿಗಳ ವ್ಯಾಪಾರದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿರುವುದಾಗಿ ಹೇಳಿದೆ.
ಅಮೆರಿಕ ತನ್ನ ಆರ್ಥಿಕ ಮತ್ತು ವ್ಯಾಪಾರ ನಿರ್ಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಒತ್ತಾಯಿಸಿದರೆ, ಚೀನಾವು ಅಗತ್ಯವಾದ ಪ್ರತಿಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಕೊನೆಯವರೆಗೂ ಹೋರಾಡಲು ದೃಢವಾದ ಇಚ್ಛಾಶಕ್ತಿ ಮತ್ತು ವಿಧಾನಗಳನ್ನು ಹೊಂದಿದೆ ಎಂದು ಚೀನಾ ವಾಣಿಜ್ಯ ಸಚಿವಾಲಯ ತಿಳಿಸಿದೆ.