ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಇಬ್ಭಾಗವಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗಿದೆ. ಮೂರು ತಿಂಗಳಲ್ಲೇ ಹಾಲು ಒಕ್ಕೂಟ ಸಾಕಷ್ಟು ಲಾಭಗಳಿಸಿದೆ.
ಲಾಭದಲ್ಲಿ ಜಿಲ್ಲೆಯ ಹಾಲು ಉತ್ಪಾದಕರಿಗೂ ಪಾಲು ನೀಡಲು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನಿರ್ಧರಿಸಿದೆ. ಪ್ರತಿದಿನ ಚಿಕ್ಕಬಳ್ಳಾಪುರ ಜಿಲ್ಲೆಯಿಂದ 4 ಲಕ್ಷ ಲಿತರ್ ಹಾಲು ಉತ್ಪಾದನೆಯಾಗುತ್ತಿದ್ದು, ಹಾಲು ಉತ್ಪಾದಕರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಹಾಲು ಉಪಾದಕ ಒಕ್ಕೂಡ ಹಾಲು ಉತ್ಪಾದಕರಿಗೆ ಉಗಾದಿ ಹಬ್ಬದ ಕೊಡುಗೆ ನೀಡಲು ಮುಂದಾಗಿದೆ.
ಜಿಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 1 ರೂಪಾಯಿ ಬೋನಸ್ ನ್ಡಿ, ಪ್ರತಿ ಲೋಟರ್ ಗೆ 32.40 ರೂ ನಿಡಲು ಘೀಷಿಸಿದೆ. ಬೇಸಿಗೆಯಲ್ಲಿ ಹಾಲು ಉತಾದನೆ ಸಾಮಾನ್ಯವಾಗಿ ಕುಂಠಿವಾಗುತ್ತದೆ. ನಿಟ್ಟಿನಲ್ಲಿ ಹನುಗಾರಿಕೆಗೆ ಎದುರಾಗುವ ಆರ್ಥಿಕ ಸಂಕಷ್ಟಕ್ಕೆ ಸಾಥ್ ನೀಡುವ ನಿಟ್ಟಿನಲ್ಲಿ ಮಾರ್ಚ್ 15ರಿಂದ ಮೇ15ರವರೆಗೆ 60 ದಿನಗಳ ಕಾಲ ಪ್ರತಿ ಲೀಟರ್ ಹಾಲಿಗೆ 1 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಿದೆ.