ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಬಿ ವಿ ಶೃಂಗಾ ಅಭಿನಯದ ‘ಚಿಲ್ಲಿ ಚಿಕನ್’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ನೈಜ ಘಟನಾಧಾರಿತ ಈ ಸಿನಿಮಾದಲ್ಲಿ ಹಾಸ್ಯದ ಜೊತೆ ಲವ್ ಸ್ಟೋರಿ, ಸೆಂಟಿಮೆಂಟ್ ಎಲ್ಲವೂ ಇದೆ.
ಪ್ರತೀಕ್ ಪ್ರಜೋಷ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಮೆಟನೋಯಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದೀಪ್ ಭೀಮಾಜಿಯಾನಿ ಹಾಗೂ ಸುಧಾ ನಂಬಿಯಾರ್ ನಿರ್ಮಾಣ ಮಾಡಿದ್ದಾರೆ.
ಬಿ ವಿ ಶೃಂಗಾ ಸೇರಿದಂತೆ ಬಿಜೌ ತಂಗ್ಜಮ್, ಜಿಂಪಾ ಸಾಂಗ್ಪೋ ಭುಟಿಯಾ, ಹರಿಣಿ ಸುಂದರರಾಜನ್, ವಿಕ್ಟರ್ ತೌಡಮ್, ನಿತ್ಯಶ್ರೀ, ಪದ್ಮಜಾ ರಾವ್, ಹಿರಾಕ್ ಸೋನೊವಾಲ್ ಬಣ್ಣ ಹಚ್ಚಿದ್ದಾರೆ. ಆಶಿಕ್ ಕುಸುಗೋಳಿ ಸಂಕಲನ, ಶ್ರೀಶ್ ಛಾಯಾಗ್ರಹಣ ಹಾಗೂ ತ್ರಿಲೋಕ್ ತ್ರಿವಿಕ್ರಮ ಅವರ ಸಂಭಾಷಣೆ ಇದೆ. ಸಿದ್ದಾಂತ್ ಸುಂದರ್ ಸಂಗೀತ ಸಂಯೋಜನೆ ನೀಡಿದ್ದಾರೆ.
https://twitter.com/aanandaaudio/status/1803666395118354490