‘ಮಧುಮೇಹ’ ಹೊಂದಿರುವ ಮಕ್ಕಳು ಈ 4 ಜೀವಸತ್ವಗಳನ್ನು ಸೇವಿಸಲೇಬೇಕು…!

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಆದರೆ ಇದು ಮೊದಲು ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಕೂಡ ಮಧುಮೇಹ ಸಮಸ್ಯೆ ಕಾಡುತ್ತಿದೆ.

ಹಾಗಾಗಿ ಮಧುಮೇಹ ಹೊಂದಿರುವ ಮಗುವನ್ನು ಪೋಷಕರು ತುಂಬಾ ಜಾಗೃತೆಯಿಂದ ನೋಡಿಕೊಳ್ಳಬೇಕು. ಹಾಗೇ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಅವರಿಗೆ ಈ ನಾಲ್ಕು ಪ್ರಮುಖ ಜೀವಸತ್ವಗಳನ್ನು ನೀಡಬೇಕು. ಅವು ಯಾವುದೆಂಬುದನ್ನು ತಿಳಿಯಿರಿ.

ವಿಟಮಿನ್ ಡಿ – ಬಲವಾದ ಮೂಳೆಗಳು ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ವಿಟಮಿನ್ ಡಿ ಅತ್ಯಗತ್ಯ. ಇದು ನೈಸರ್ಗಿಕ ಮೂಲಗಳಾದ ಸೂರ್ಯನ ಬೆಳಕು, ಕೊಬ್ಬಿನ ಮೀನು ಮತ್ತು ಡೈರಿ ಉತ್ಪನ್ನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ವಿಶೇಷವಾಗಿ ಮಕ್ಕಳನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಂತೆ ನೋಡಿಕೊಳ್ಳಿ.

ವಿಟಮಿನ್ ಸಿ – ದೇಹದ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಲು ಸಹಾಯ ಮಾಡುವ ಶಕ್ತಿಯುತ ಉತ್ಕರ್ಷಣ ನಿರೋಧಕಗಳಾಗಿವೆ. ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿ ಮತ್ತು ಬೆರಿ ಹಣ್ಣುಗಳಲ್ಲಿ ಇದು ಹೆಚ್ಚು ಕಂಡುಬರುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಕ ಮಧುಮೇಹ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ.

ವಿಟಮಿನ್ ಬಿ ಕಾಂಪ್ಲೆಕ್ಸ್ – ಬಿ 6 ಮತ್ತು ಬಿ 12 ಸೇರಿದಂತೆ ಬಿ ಜೀವಸತ್ವಗಳು ಶಕ್ತಿ ಉತ್ಪಾದನೆ ಮತ್ತು ಚಯಾಪಚಯಕ ಕ್ರಿಯೆಗೆ ಉತ್ತಮವಾಗಿವೆ. ಇದು ಧಾನ್ಯಗಳು, ಮೊಟ್ಟೆಗಳು, ಕೋಳಿ ಮತ್ತು ಡೈರಿ ಉತ್ಪನ್ನಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ . ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ವಿಟಮಿನ್ ಎ – ಇದು ಕಣ್ಣಿನ ಆರೋಗ್ಯ ಮತ್ತು ಜೀವಕೋಶಗಳ ಬೆಳವಣಿಗೆಗೆ ಅತ್ಯಗತ್ಯ. ಸಿಹಿ ಆಲೂಗಡ್ಡೆ, ಕ್ಯಾರೆಟ್ ಮತ್ತು ಸೊಪ್ಪುಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಮಧುಮೇಹದಿಂದ ಕಣ್ಣು ಮತ್ತು ಚರ್ಮದ ಮೇಲಾಗುವ ಹಾನಿಯನ್ನು ಇದು ತಡೆಯುತ್ತದೆ ಹಾಗಾಗಿ ಇದನ್ನು ಸೇವಿಸಿದರೆ ಆರೋಗ್ಯಕರ ಚರ್ಮ ಮತ್ತು ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಾಧ್ಯ.

ಈ ಜೀವಸತ್ವಗಳು ನಿಮ್ಮ ಮಗುವಿನ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ನಿಮ್ಮ ಮಗುವಿನ ಆರೋಗ್ಯಕ್ಕಾಗಿ ಪ್ರತಿದಿನ ಈ ವಿಟಮಿನ್ಗಳು ಸಮೃದ್ಧವಾಗಿರುವ ಆಹಾರವನ್ನು ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read