ಮುಂಬೈ: 6 ಹಾಗೂ 7 ವರ್ಷಗಳ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ರಿಯಲ್ ಎಸ್ಟೆಟ್ ಏಜೆಂಟ್ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.
ರಾಜನ್ ಜಾದವ್ ಬಂಧಿತ ಆರೋಪಿ. ಅಪಾರ್ಟ್ ಮೆಂಟ್ ವೊಂದರ ಪ್ಯಾಸೇಜ್ ನಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಮಕ್ಕಳನ್ನು ಮಾತನಾಡಿಸುವ ನೆಪದಲ್ಲಿ ಕಿರುಕುಳ ನೀಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಆರೋಪಿ ರಾಜನ್ ನನ್ನು ಬಂಧಿಸಿರುವ ಅಂಧೇರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.