ಬಾಲಕರನ್ನು ತಲೆಕೆಳಗಾಗಿ ತೂಗಿಹಾಕಿ ಮೆಣಸಿನ ಹೊಗೆ ಹಾಕಿ ಚಿತ್ರಹಿಂಸೆ ನೀಡಿದ ಕಿಡಿಗೇಡಿಗಳು

ಅಪ್ರಾಪ್ರ ಬಾಲಕರಿಬ್ಬರನ್ನು ತಲೆಕೆಳಗಾಗಿ ನೇತುಹಾಕಿ ಮೆಣಸಿನ ಕಾಯಿ ಹೊಗೆ ಹಾಕಿ ಕಿಡಿಗೇಡಿಗಳು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಮಕ್ಕಳ ಓರ್ವ ತಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುರುವ ವಿಡಿಯೋ ನೋಡಿದಾಗ ವಿಷಯ ತಿಳಿದು ಮಗನನ್ನು ಪ್ರಶ್ನೆ ಮಡಿದ್ದಾರೆ. ಈ ವೇಳೆ ನಡೆದ ವಿಷಯವನ್ನು ಮಗ ಬಾಯ್ಬಿಟ್ಟಿದ್ದಾನೆ.

ನ.1ರಂದು ಮಧ್ಯಾಹ್ನ ಗ್ರಾಮದ ಹುಡುಗನೊಬ್ಬ ನನ್ನನ್ನು ಅಂಗಡಿಗೆ ಕರೆದಿದ್ದ. ನಾನು ನನ್ನ ಸ್ನೇಹಿತನೊಂದಿಗೆ ಅಲ್ಲಿಗೆ ಹೋಗಿದ್ದಾಗ ಆತ ನಮ್ಮ ಮೇಲೆ ವಾಚ್ ಕದ್ದ ಆರೋಪ ಮಾಡಿದ್ದಾನೆ. ಆರೋಪ ನಿರಾಕರಿಸಿದ್ದಕ್ಕೆ ನಮ್ಮನ್ನು ಥಳಿಸಿ ಕೈಕಾಲು ಕಟ್ಟಿಹಾಕಿ ತಲೆಕೆಳಗಾಗಿ ನೇತು ಹಾಕಿದ್ದಾರೆ. ಅಲ್ಲದೇ ಮೆಣಸಿನಕಾಯಿ ಹೊಗೆ ಹಾಕಿ ಅದರಲ್ಲಿ ಉಸಿರಾಡುವಂತೆ ಚಿತ್ರಹಿಂಸೆ ನೀಡಿದ್ದಾರೆ.

ಈ ವೇಳೆ ಸುತ್ತಮುತ್ತಲಿನ ಜನರು ಇದನ್ನು ವಿಡಿಯೋ ಮಾಡಿದ್ದಾರೆ. ಕೆಲವರು ನಮ್ಮನ್ನು ನೋಡಿ ನಕ್ಕಿದ್ದಾರೆ ಎಂದು ಬಾಲಕ ತಿಳಿಸಿದ್ದಾನೆ. ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ವೈರಲ್ ಆಗಿರುವ ವಿಡಿಯೋ ಆಧಾರದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಿ ವಿಚರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಸುಂದರ್ ಸಿಂಗ್ ತಿಳಿಸಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read