ಹಾವೇರಿ: ನೀರು ತುಂಬಿದ್ದ ಬಕೆಟ್ ನಲ್ಲಿ ಮುಳುಗಿ 14 ತಿಂಗಳ ಮಗು ಮೃತಪಟ್ಟ ಘಟನೆ ಹಾವೇರಿಯ ಶಿವಬಸವ ನಗರದಲ್ಲಿ ನಡೆದಿದೆ.
ರವಿ ಯಳಂಬ್ಲಿಮಠ ಅವರ ಮಗು ದಕ್ಷಿತ್ ಮೃತಪಟ್ಟಿದೆ. ಅಕ್ಟೋಬರ್ 19 ರಂದು ಬೆಳಿಗ್ಗೆ ಮಗು ಆಟವಾಡುತ್ತಾ ಮನೆಯ ಮುಂದೆ ನೀರು ತುಂಬಿಸಿಟ್ಟಿದ್ದ ಬಕೆಟ್ ಬಳಿ ಬಂದಿದೆ. ಆಕಸ್ಮಿಕವಾಗಿ ತಲೆಕೆಳಗಾಗಿ ಬಿದ್ದು ನೀರಿನಲ್ಲಿ ಮುಳುಗಿದೆ. ಪ್ರಜ್ಞೆ ತಪ್ಪಿದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಈ ವೇಳೆಗೆ ಮಗು ಮೃತಪಟ್ಟಿದೆ.
ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ತಂದೆ ರವಿ ಅವರು ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
