BREAKING : ಬಾಲನಟಿ ‘ವಂಶಿಕಾ’ ಹೆಸರಿನಲ್ಲಿ ಹಣಕಾಸು ವಂಚನೆ ಪ್ರಕರಣ : ಆರೋಪಿ ನಿಶಾಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಸ್ಯಾಂಡಲ್ ವುಡ್ ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ 40 ಲಕ್ಷ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿಶಾ ನರಸಪ್ಪಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬೆಂಗಳೂರಿನ 39 ನೇ ಎಂಸಿಎಂಎಂ ಕೋರ್ಟ್ ಇಂದು ಆದೇಶ ಹೊರಡಿಸಿದ್ದು, ಲಕ್ಷಾಂತರ ಹಣ ವಂಚನೆ ಎಸಗಿದ ಆರೋಪಿ ನಿಶಾ ನರಸಪ್ಪಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಹೌದು, ಬೇಬಿ ಕಾಂಟೆಸ್ಟ್, ರಿಯಾಲಿಟಿ ಶೋ, ಧಾರಾವಾಹಿಗಳ ಆಡಿಷನ್ ಸೇರಿ ಹಲವು ಸಿನಿಮಾಗಳಲ್ಲಿ ಚಾನ್ಸ್ ನೀಡುವುದಾಗಿ ನಿಶಾ ನರಸಪ್ಪ ವಂಶಿಕಾ ಆನಂದ್ ಹೆಸರನ್ನು ಮುಂದಿಟ್ಟುಕೊಂಡು, ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂತೆಯೇ ನಿನ್ನೆ ನಿಶಾಳನ್ನು ಬಂಧಿಸಿದ್ದ ಪೊಲೀಸರು ಇಂದು ಕೋರ್ಟ್ ಗೆ ಹಾಜರುಪಡಿಸಿದ್ದರು.

ಮಕ್ಕಳ ಕಾರ್ಯಕ್ರಮ, ಟ್ಯಾಲೆಂಟ್ ಶೋ, ವಿವಿಧ ಜಾಹೀರಾತು ನೆಪದಲ್ಲಿ 40 ಲಕ್ಷ ವಂಚನೆ ವಂಚನೆ ಮಾಡಿದ ಖತರ್ನಾಕ್ ಲೇಡಿ ನೂರಾರು ಜನ ಪೋಷಕರಿಂದ ಹಣ ಪಡೆದು ವಂಚಿಸಿದ್ದಾಳೆ ಎನ್ನಲಾಗಿದೆ. ನಂತರ ಹಣ ಕಳೆದುಕೊಂಡು ಪೋಷಕರು ಒಟ್ಟಾಗಿ ವಂಚಕಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಘಟನೆ ಸಂಬಂಧ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ನಿಶಾಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಪ್ರತಿಭೆ ಮೂಲಕವೇ ನಾಡಿನ ಜನರ ಮನಗೆದ್ದಿರುವ ಪುಟಾಣಿ ವಂಶಿಕಾ ಆನಂದ್ ಹೆಸರಿನಲ್ಲಿ ನಿಶಾ ನರಸಪ್ಪ ಮಹಾಮೋಸ ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಂವಾಗಿದೆ. ಹಣ ಕಳೆದುಕೊಂಡ ಪೋಷಕರು ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ಇಂತಹ ವಂಚಕರಿಂದ ಪೋಷಕರು ಎಚ್ಚರದಿಂದಿರುವುದು ಒಳಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read