BIG NEWS: ತುಂಗಾ ದಳದ ನಕ್ಸಲಿರಿಗಾಗಿ ಮುಂದುವರೆದ ಶೋಧ ಕಾರ್ಯಾಚರಣೆ; ಸುಳಿವು ನೀಡಿದವರಿಗೆ 5 ಲಕ್ಷ ಘೋಷಣೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಡಗಿರುವ ನಕ್ಸಲಿರಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ತುಂಗಾ ದಳದ ನಕ್ಸಲಿಗಾಗಿ ಕೂಂಬಿಂಗ್ ಮುಂದುವರೆಸಲಾಗಿದೆ.

ಮುಂಡಗಾರು ಲತಾ, ಜಯಣ್ಣ ಸೇರಿದಂತೆ 8 ನಕ್ಸಲಿರಿಗಾಗಿ ಕಳೆದ 13 ದಿನಗಳಿಂದ ನಿರಂತರವಾಗಿ ಕೂಂಬಿಂಗ್ ನಡೆಸಲಾಗುತ್ತಿದೆ. ಎರಡು ತಿಂಗಳ ಹಿಂದೆ ಕೇರಳದಿಂದ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿರುವ ನಕ್ಸಲರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗಾರು, ಕಡೆಗುಂಡಿ, ಯಡಗುಂದಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮುಂಡಗಾರು ಲತಾ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದಿದ್ದಳು.

ನ.11ರಂದು ರಾತ್ರಿ ಎ ಎನ್ ಎಫ್ ಪಡೆಯಿಂದ ತಪ್ಪಿಸಿಕೊಂಡಿದ್ದ ಈ ನಕ್ಸಲರು ಚಿಕ್ಕಮಗಳೂರಿನ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎ ಎನ್ ಎಫ್ ಪಡೆಯಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಅಡಗಿರುವ ನಕ್ಸಲರ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ಘೋಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read