ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಫಿ ತೋಟ, ಗ್ರಾಮಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕಾಡಾನೆ ಹಿಂಡು ಈಗ ಮನೆಗಳಿಗೂ ನುಗ್ಗಿ ಆತಂಕ ಮೂಡಿಸಿವೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳು ಮನೆಯೊಂದರ ಅಂಗಳಕ್ಕೆ ನುಗ್ಗಿವೆ. ಆನೆಯೊಂದು ಶೆಡ್ ಗಳನ್ನು ಮುರಿದು ದಾಂಧಲೆ ನಡೆಸಿದೆ. ಮನೆಯಲ್ಲಿದ್ದ ಜನರು ಜೀವಭಯದಲ್ಲಿ ಕಂಗಾಲಾಗಿದ್ದಾರೆ.
ಕಾಡಾನೆಗಳ ಹಿಂಡು ಬಾಳೆ, ಅಡಿಕೆ, ಕಾಫಿ ತೋಟಗಳನ್ನು ಸಂಪೂರ್ಣ ನಾಶ ಮಾಡಿವೆ. ಮೂಡಿಗೆರೆ ಭಾಗದಲ್ಲಿ 42 ಕಾಡಾನ್ನೆಗಳ ಹಿಂಡು ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇಷ್ಟಾಗ್ಯೂ ಅರಣ್ಯ ಇಲಾಖೆ ಕಾಡಾನೆಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.