ಚಿಕ್ಕಮಗಳೂರು: ರಾಜ್ಯದ ಜಿಲ್ಲೆ ಜಿಲ್ಲೆಗಳಲಿಯೂ ಹೃದಯಾಘಾತದ ಸಾವಿನ ಸರಣಿ ಹೆಚ್ಚುತ್ತಿದೆ. ಚಿಕ್ಕಮಗಳೂರಿನಲ್ಲಿ ಹೃದಯಾಘಾತಕ್ಕೆ 29 ವರ್ಷದ ಯುವತಿ ಬಲಿಯಾಗಿದ್ದಾರೆ.
ಮೀನಾಕ್ಷಿ (29) ಹೃದಯಾಘಾತದಿಂದ ಸಾವನ್ನಪ್ಪಿದ ಯುವತಿ. ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದ ಮೀನಾಕ್ಷಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋಗಲೆಂದು ಕಾರಿನಲ್ಲಿ ಕುಳಿತವರು ಹೃದಯಾಘಾತದಿಂದ ಕಾರಿನಲ್ಲಿಯೇ ಮೃತಪಟ್ಟಿದ್ದಾರೆ.
ಮೂಡಿಗೆರೆ ತಾಲೂಕಿನಲ್ಲಿ 75 ವರ್ಷದ ವೃದ್ಧರೊಬ್ಬರು ಕೂಡ ಮನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಸುಮಿತ್ರೇಗೌಡ ಎಂದು ಗುರುತಿಸಲಾಗಿದೆ.