ಚಿಕ್ಕಮಗಳೂರು: ಬ್ರೆಡ್ ಗೆ ಮತ್ತು ಬರುವ ಔಷಧಿ ಬೆರೆಸಿ ತಿನ್ನಿಸಿ ದನಗಳನ್ನು ಕದ್ದೊಯ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.
ಬಣಕಲ್ ಆಸ್ಪತ್ರೆಯ ಮುಂಭಾಗ ಈ ಘಟನೆ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳರು ಹಸುಗಳಿಗೆ ಬ್ರೆಡ್ ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ತಿನ್ನಿಸಿದ್ದಾರೆ. ಬಳಿಕ ದನಗಳು ಮಂಕಾಗುತ್ತಿದ್ದಂತೆ ಅವುಗಳ ಸಮೇತ ಕಳ್ಳರು ಪರಾರಿಯಾಗಿದ್ದಾರೆ.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.