ಚಿಕ್ಕಮಗಳೂರು: ತಂಗಿಯನ್ನು ಕೊಲೆಗೈದಿದ್ದ ಭಾವನನ್ನುಬಾಮೈದ ಬರ್ಬರವಾಗಿ ಹತ್ಯೆಗೈರುವ ಘಟನೆ ಚಿಕ್ಕಮಗಳುರು ಜಿಲ್ಲೆಯ ತರೀಕೆರೆ ತಾಲೂಕಿನ ಕುರಕುಚ್ಚಿ ಗ್ರಾಮದಲ್ಲಿ ನಡೆದಿದೆ.
ಚೇತನ್ (23) ಕೊಲೆಯಾದ ವ್ಯಕ್ತಿ. ಬಾಮೈದ ಸಂತೋಷ್ ಹಾಗೂ ಸಚಿನ್ ಬಾವನನ್ನೇ ಕೊಲೆಗೈದ ಆರೋಪಿಗಳು. ವರಮಹಾಲಕ್ಷ್ಮೀ ಹಬ್ಬಕ್ಕೆಂದು ಊರುಗೆ ಬಂದಿದ ಚರಣ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ತಿಂಗಳ ಹಿಂದೆ ಸಂತೋಷ್ ಹಾಗೂ ಸಚಿನ್ ಅವರ ತಂಗಿ ಮೇಘನಾಳನ್ನು ಭಾವ ಚೇತನ್ ಕೊಲೆಗೈದಿದ್ದ. ಮೇಘನಾ ಹಾಗೂ ಚೇತನ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತನ್ನನ್ನು ಬಿಟ್ಟು ತವರಿಗೆ ಹೋದಳು ಎಂಬ ಕಾರಣಕ್ಕೆ ಚೇತನ್ 2024ರ ಏಪ್ರಿಲ್ 29ರಂದು ಪತ್ನಿ ಮೇಘನಾ ಬಟ್ಟೆ ತೊಳೆಯಲು ಹೋದಾಗ ಆಕೆಯನ್ನು ಕೊಂದು ಶವ್ವನ್ನು ಕಾಲುವೆಗೆ ಬಿಸಾಕಿದ್ದ. ಪತ್ನಿ ಕೊಲೆಗೈದು ಜೈಲು ಸೇರಿದ್ದ ಚೇತನ್ ಮೂರು ತಿಂಗಳ ಹಿಂದೆ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದ.
ಹಬ್ಬಕ್ಕೆ ಊರಿಗೆ ಬಂದು ವಾಪಸ್ ಆಗುತ್ತಿದ್ದಾಗ ಬೈಕ್ ನಲ್ಲಿ ತೆರಳುತ್ತಿದ್ದ ಚೇತನ್ ಮೇಲೆ ಸಂತೋಷ್ ಹಾಗೂ ಸಚಿನ್ ಮಚ್ಚು ಬೀಸಿ ಕೊಲೆಗೈದಿದ್ದಾರೆ.