ಚಿಕ್ಕಬಳ್ಳಾಪುರ: ನೀರಿಗೆ ಜಾರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿ ಸೇರಿದಂತೆ ಮೂವರು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.
ಫರಿನಾ ಬೇಗಂ, ಇಮ್ರಾನ್ ಹಾಗೂ ಬಶೀರ್ ಮೃತ ದುರ್ದೈವಿಗಳು. ಫರಿನಾ ಬೇಗಂ ಅವರ ಮಗು ಆಕಸ್ಮಿಕವಾಗಿ ಜಾರಿ ನೀರಿಗೆ ಬಿದ್ದಿತ್ತು. ಮಗುವನ್ನು ರಕ್ಷಿಸಲೆಂದು ತಾಯಿ ಫರಿನಾ ಬೇಗಂ, ಜಲಾಶಯದ ನೀರಿಗೆ ಇಳಿದಿದ್ದಾರೆ. ಹೀಗೆ ಒಬ್ಬರನ್ನು ರಕ್ಷಿಸಲು ಮತ್ತೊಬ್ಬರು ಹೋಗಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿಗೆ ಬಿದ್ದ ಮಗುವನ್ನು ರಕ್ಷಿಸಲಾಗಿದೆ. ಈ ವೇಳೆ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.