BREAKING: ಪೊಲೀಸರ ಎದುರಲ್ಲೇ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಜಮೀನು ವಿಚಾರವಾಗಿ ಗಲಾಟೆ; ಮಹಿಳೆಯರು, ಮಕ್ಕಳಿಗೂ ಮನ ಬಂದಂತೆ ಥಳಿತ

ಚಿಕ್ಕಬಳ್ಳಾಪುರ: ಒಂದುವರೆ ಎಕರೆ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿಯೇ ನಡೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೊಟ್ಲೂರು ಗ್ರಾಮದಲ್ಲಿ ನಡೆದಿದೆ.

ಇಂದ್ರಮ್ಮ ಹಾಗೂ ಜಗದೀಶ್ ಕುಟುಂಬಗಳ ನಡುವೆ ಜಮೀನಲ್ಲಿಯೇ ಗಲಾಟೆ ನಡೆದಿದೆ. ತನ್ನ ಹೆಸರಲ್ಲಿದ್ದ ಒಂದು ಎಕರೆ ಜಮೀನಿನಲ್ಲಿ ಇಂದ್ರಮ್ಮ ಹಾಗೂ ಕುಟುಂಬದವರು ಮಾವಿನ ಸಸಿಗಳನ್ನು ಹಾಕಿದ್ದರು. ರಾತ್ರೋರಾತ್ರಿ ಜಗದೀಶ್ ಕುಟುಂಬ ಈ ಸಸಿಗಳನ್ನು ಕಿತ್ತು ಹಾಕಿ ಗಲಾಟೆ ಮಾಡಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ.

ಈ ವೇಳೆ ಎರಡೂ ಕುಟುಂಬದವರು ಪೊಲೀಸರ ಎದುರಲ್ಲೇ ಜಮೀನಿನಲ್ಲಿ ಹೊಡೆದಾಡಿಕೊಂಡಿವೆ. ಮಕ್ಕಳನ್ನು ಎತ್ತಿಕೊಂಡಿದ್ದ ಮಹಿಳೆಯರ ಮೇಲೆ ಇನ್ನೊಂದು ಕುಟುಂಬದ ಪುರುಷರು ಹೊಡೆದಿದ್ದಾರೆ. ಇದಕ್ಕೆ ಬಗ್ಗದ ಮಹಿಳೆಯರು ಅವರ ಮೇಲೂ ಪ್ರತಿದಾಳಿ ನಡೆಸಿದ್ದಾರೆ. ಎರಡೂ ಕುಟುಂಬಗಳ ನಡುವೆ ಮಾರಾಮಾರಿಯೇ ನಡೆದಿದೆ.

ಹೊಡೆದಾಟವನ್ನು ತಪ್ಪಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಸದ್ಯ ಎರಡು ಕುಟುಬದವರ ಗಲಾಟೆಯನ್ನು ಪೊಲೀಸ್ ಸಿಬ್ಬಂದಿ ನಿಯಂತ್ರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read