ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್: ಏರಿಕೆಯಾಗಿದ್ದ ದರ ಇಳಿಕೆ

ಬೆಂಗಳೂರು: ಏರುಗತಿಯಲ್ಲಿ ಸಾಗಿದ್ದ ಚಿಕೆನ್ ದರ ಇಳಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಚಿಕನ್ ದರ ಏರಿಕೆಯಾಗಿ ಗ್ರಾಹಕರಿಗೆ ಬಿಸಿ ತಟ್ಟಿತ್ತು.

ಒಂದು ಕೆಜಿ ಚಿಕನ್ ದರ 250 ರಿಂದ 300 ರೂ.ವರೆಗೆ ಏರಿಕೆಯಾಗಿತ್ತು. ಬೆಲೆ ಏರಿಕೆಯಿಂದಾಗಿ ಚಿಕನ್ ಪ್ರಿಯರು ಕಂಗಾಲಾಗಿದ್ದರು. ಈಗ ದರ ಕಡಿಮೆಯಾಗಿದ್ದು, 220 ರೂ.ನಿಂದ 250 ರೂ.ವರೆಗೆ ಇಳಿಕೆಯಾಗಿದ್ದು, ಶ್ರಾವಣದ ವೇಳೆಗೆ ಮತ್ತಷ್ಟು ಇಳಿಕೆಯಾಗಲಿದೆ. ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಹಾರ ಸೇವಿಸುವುದಿಲ್ಲ. ಹೀಗಾಗಿ ಚಿಕನ್ ದರ ಮತ್ತಷ್ಟು ಕಡಿಮೆಯಾಗಲಿದೆ.

ಇನ್ನು ಬೇಸಿಗೆಯಲ್ಲಿ ಕೋಳಿಗಳು ಆಹಾರ ಕಡಿಮೆ ಸೇವಿಸುತ್ತವೆ. ಹೀಗಾಗಿ ಬೆಳವಣಿಗೆ ಕಡಿಮೆಯಾಗಿ ಕೋಳಿಗಳ ಉತ್ಪಾದನೆ ಕುಂಠಿತವಾಗಿದ್ದರಿಂದ ದರ ಏರಿಕೆಯಾಗಿತ್ತು. ಮೊಟ್ಟೆ ದರ ಕೂಡ ಭಾರಿ ಏರಿಕೆ ಕಂಡಿತ್ತು. ಈಗ ಮಳೆ ಆಗುತ್ತಿದ್ದು, ಕೋಳಿಗಳಿಗೆ ಪೂರಕ ವಾತಾವರಣವಿದೆ. ಕೋಳಿಗಳು ಆಹಾರ ಸೇವಿಸುತ್ತಿದ್ದು, ತೂಕವೂ ಹೆಚ್ಚಾಗುತ್ತಿದೆ. ಶ್ರಾವಣದ ವೇಳೆಗೆ ಬೇಡಿಕೆ ಕಡಿಮೆಯಾಗುವುದರಿಂದ ಚಿಕನ್ ದರ ಮತ್ತಷ್ಟು ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read