Video : ತನ್ನ ತಪ್ಪಿನಿಂದ ವಿಮಾನ ಮಿಸ್ ಮಾಡಿಕೊಂಡು ಸಿಬ್ಬಂದಿ ಮೇಲೆ ಕೂಗಾಡಿ ಕಂಪ್ಯೂಟರ್ ಎಸೆದ ಮಹಿಳೆ….!

ಕೋಪದಲ್ಲಿದ್ದಾಗ ಜನರಿಗೆ ಏನು ಮಾಡ್ತಿದ್ದೇವೆ ಎನ್ನುವ ಅರಿವು ಇರೋದಿಲ್ಲ. ಒಬ್ಬರು ಕಿರುಚಾಡಿದ್ರೆ ಮತ್ತೊಬ್ಬರು ಕೈನಲ್ಲಿದ್ದ ವಸ್ತುವನ್ನು ಎಸೆಯುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ವಿಡಿಯೋ ಒಂದು ವೈರಲ್‌ ಆಗಿದೆ. ಆಕೆ ಕೋಪದಲ್ಲಿ ತನ್ನ ಕೈನಲ್ಲಿದ್ದ ವಸ್ತು ಮಾತ್ರವಲ್ಲ, ಅಲ್ಲಿ ಇಲ್ಲಿ ಕಂಡ ವಸ್ತುವನ್ನೆಲ್ಲ ಎತ್ತಿ ಬಿಸಾಡ್ತಿದ್ದಾಳೆ.

ಘಟನೆ ಚಿಕಾಗೋದ ಒ ಹೇರ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮಹಿಳೆ, ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಆದ್ರೆ ವಿಮಾನ ನಿಲ್ದಾಣಕ್ಕೆ ಬರುವಷ್ಟರಲ್ಲಿ ವಿಮಾನ ಹಾರಾಟ ಶುರು ಮಾಡಿತ್ತು. ವಿಮಾನ ಪ್ರಯಾಣ ಸಾಧ್ಯವಾಗದ ಕಾರಣ ಮಹಿಳೆ ಕೋಪಗೊಂಡಿದ್ದಾಳೆ.

ಹುಚ್ಚಿಯಂತೆ ವರ್ತಿಸಲು ಶುರು ಮಾಡಿದ್ದಾಳೆ. ತನ್ನ ಕೈನಲ್ಲಿದ್ದ ವಸ್ತು, ಲಗೇಜ್‌ ಸೇರಿದಂತೆ ನಿಲ್ದಾಣದಲ್ಲಿದ್ದ ವಸ್ತುವನ್ನೆಲ್ಲ ಮನಸ್ಸಿಗೆ ಬಂದಂತೆ ಎಸೆಯಲು ಶುರು ಮಾಡಿದ್ದಾಳೆ. ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚೆಕ್‌ ಇನ್‌ ಕೌಂಟರ್‌ ಗೆ ನುಗ್ಗುವ ಮಹಿಳೆ ಫ್ರಾಂಟಿಯರ್ ಏರ್‌ಲೈನ್ಸ್ ಉದ್ಯೋಗಿಗಳ ಮೇಲೆ ಕಂಪ್ಯೂಟರ್ ಮಾನಿಟರ್ ಎಸೆಯುತ್ತಿರೋದನ್ನು ವಿಡಿಯೋದಲ್ಲಿ ನೋಡ್ಬಹುದು. ಸಿಬ್ಬಂದಿ ಆಕೆಯನ್ನು ತಡೆಯುವ ಪ್ರಯತ್ನ ನಡೆಸುತ್ತಿದ್ದರೂ ಆಕೆ ತನ್ನ ವಿದ್ವಂಸಕ ಕೃತ್ಯ ಮುಂದುವರೆಸಿರೋದನ್ನು ವಿಡಿಯೋದಲ್ಲಿ ನೋಡ್ಬಹುದು.

https://twitter.com/tecas2000/status/1823829754010599782?ref_src=twsrc%5Etfw%7Ctwcamp%5Etweetembed%7Ctwterm%5E1823829754010599782%7Ctwgr%5Ea8a5c0eb553bc552c8c9e9d3c3c24e221ffdb928%7Ctwcon%5Es1_&ref_url=https%3A%2F%2Fhindi.news24online.com%2Fviral-video%2Fchicago-airport-woman-passenger-in-us-airport-viral-video-chicago-viral-video%2F823983%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read