ಅಕ್ರಮ ಬೈಕ್ ಸ್ಟಂಟ್ ವಿಡಿಯೋ ವೈರಲ್ ಆದ ನಂತರ ಛತ್ತೀಸ್‌ಗಡ ಪೊಲೀಸರು ಯುವ ಜೋಡಿಯನ್ನ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಜನವರಿಯಲ್ಲಿ ಬೈಕ್ ಸವಾರನ ಎದುರಿಗೆ ಮುಖ ಮಾಡಿ ಯುವತಿಯು ಬೈಕ್ ನಲ್ಲಿ ಕೂತು ರೊಮ್ಯಾಂಟಿಕ್ ರೈಡ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ವಿಡಿಯೋದಲ್ಲಿ ಹುಡುಗ ಅಥವಾ ಹುಡುಗಿ ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ಬೈಕ್‌ನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಈ ವಿಡಿಯೋ ಛತ್ತೀಸ್‌ಗಢ ಪೊಲೀಸರ ಗಮನ ಸೆಳೆಯಿತು.
ತಕ್ಷಣ ಅವರು ಜೋಡಿಯನ್ನು ಪತ್ತೆ ಮಾಡಲು ಮುಂದಾದರು. 200 ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸ್ಕ್ಯಾನ್ ಮಾಡಿ ಕೂಡಲೇ ಜೋಡಿಯನ್ನು ಬಂಧಿಸಿದರು.
ಇದರ ನಂತರ ದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ, ಆರೋಪಿ ಜಾವೇದ್ ಎಂಬ ಬೈಕ್ ಸವಾರನನ್ನು ನಿಂದಿಸುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ತನ್ನ ಮಾಜಿ ಪ್ರೇಮಿಯನ್ನು ಅಸೂಯೆ ಪಡಿಸಲು ಬಯಸಿದ ತನ್ನ ಗೆಳತಿಯ ಕೋರಿಕೆಯ ಮೇರೆಗೆ ತಾನು ಈ ಸಾಹಸ ಮಾಡಿದ್ದೇನೆ ಎಂದು ಜಾವೇದ್ ಹೇಳುವುದನ್ನು ವೀಡಿಯೊದಲ್ಲಿ ಕಾಣಬಹುದು.
ಪೊಲೀಸ್ ಅಧಿಕಾರಿ ಜಾವೇದ್‌ಗೆ ಛೀಮಾರಿ ಹಾಕಿದ್ದು, ಈ ರೀತಿಯ ಸ್ಟಂಟ್‌ಗಳು ಅಪಘಾತಗಳಿಗೆ ಕಾರಣವಾಗಬಹುದು ಎಂದು ಹೇಳಿದರು.
ರೊಮ್ಯಾಂಟಿಕ್ ರೈಡ್ ಗೆ ಬಳಸುತ್ತಿದ್ದ ಬೈಕು ನೋಂದಣಿ ಫಲಕವನ್ನು ಹೊಂದಿಲ್ಲ ಮತ್ತು ತನಿಖೆಯ ಸಮಯದಲ್ಲಿ ಬೈಕ್ ಒಂದು ವರ್ಷದ ಹಿಂದೆ ಹಳ್ಳಿಯಿಂದ ಕದ್ದಿರುವುದು ಎಂಬುದು ಕಂಡುಬಂದಿದೆ. ಬೈಕ್ ಮಾರುಕಟ್ಟೆ ಬೆಲೆ 1.50 ಲಕ್ಷ ರೂ. ಆದರೆ ಆರೋಪಿಗಳು ಯಾವುದೇ ದಾಖಲೆಗಳಿಲ್ಲದೆ 9 ಸಾವಿರ ರೂ. ಗೆ ಬೈಕ್ ಪಡೆದಿದ್ದರು. ಇದೀಗ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
https://twitter.com/sirajnoorani/status/1618101874305159170?ref_src=twsrc%5Etfw%7Ctwcamp%5Etweetembed%7Ctwterm%5E1618101874305159170%7Ctwgr%5Efbba35311cf3c477a0e1b89e8b770824da0db569%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fchhattisgarh-couple-performs-stunts-on-stolen-bike-8485721%2F
https://twitter.com/sirajnoorani/status/1618101957801160704?ref_src=twsrc%5Etfw%7Ctwcamp%5Etweetembed%7Ctwterm%5E1618101957801160704%7Ctwgr%5Efbba35311cf3c477a0e1b89e8b770824da0db569%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fchhattisgarh-couple-performs-stunts-on-stolen-bike-8485721%2F