SHOCKING VIDEO: ಕಾರಿನ ಸನ್ ರೂಫ್ ತೆರೆದು ಗೆಳೆಯನ ಜೊತೆ ಯುವತಿ ಮದ್ಯ ಸೇವನೆ; ಪೊಲೀಸರಿಂದ ಜೋಡಿ ಅರೆಸ್ಟ್…!

ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಕಾರಿನ ಸನ್ ರೂಫ್ ತೆರೆದು ತಾವು ಸಾಗುವ ಮಾರ್ಗ ಮಧ್ಯದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗವಾಗಿ ಮದ್ಯ ಸೇವಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಇಂತಹದೊಂದು ಘಟನೆ ತಮಿಳುನಾಡಿನ ಚೆನ್ನೈ ನಗರದ ತಾಂಬರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಲ್ಲಿನ ಜಿಎಸ್‌ಟಿ ರಸ್ತೆಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ 23 ವರ್ಷದ ಸಂಜಯ್ ತನ್ನ ಗೆಳತಿ ವೀಣಾ ಜೊತೆ ಕಾರಿನ ಸನ್ ರೂಫ್ ತೆರೆದು ಮಧ್ಯ ಸೇವಿಸಲು ಆರಂಭಿಸಿದ್ದಾನೆ. ಇದನ್ನು ದಾರಿಹೋಕರು ಸಹ ಗಮನಿಸಿದ್ದಾರೆ.

ಇದ್ಯಾವುದನ್ನು ಲೆಕ್ಕಿಸದೆ ಈ ಜೋಡಿ ಮದ್ಯ ಸೇವಿಸುತ್ತ ಸಾಗಿದ್ದು, ಇವರ ಮತ್ತೊಬ್ಬ ಗೆಳೆಯ ಕಾರು ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ದಾರಿಹೋಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ಜೋಡಿ ಆಟಾಟೋಪವನ್ನು ಸೆರೆಹಿಡಿದಿದ್ದು ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ ರಿಜಿಸ್ಟ್ರೇಷನ್ ನಂಬರ್ ಮೂಲಕ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

https://twitter.com/lokmattimeseng/status/1820300101400576203?ref_src=twsrc%5Etfw%7Ctwcamp%5Etweetembed%7Ctwterm%5E1820300101400576203%7Ctwgr%5E787eae92616d26ddc25aafe85f59ae8489e2b

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read